Asianet Suvarna News Asianet Suvarna News

ಬೆಂಗಳೂರು: ವಿಂಟೇಜ್ ಕಾರಿನಲ್ಲಿ ರೌಂಡ್ ಹಾಕಿದ ಸಿಎಂ ಬೊಮ್ಮಾಯಿ‌

ವಿಧಾನಸೌಧದಲ್ಲಿ ಗ್ರ್ಯಾಂಡ್ ಸ್ಟೆಪ್ ಮೇಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

Oct 2, 2022, 9:24 PM IST

ಬೆಂಗಳೂರು(ಅ.02):  68 ನೇ ವನ್ಯಜೀವಿ ಸಪ್ತಾಹ 2022ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಇಂದು(ಭಾನುವಾರ) ವಿಧಾನಸೌಧದಲ್ಲಿ ಗ್ರ್ಯಾಂಡ್ ಸ್ಟೆಪ್ ಮೇಲೆ ಸಿಎಂ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಬಳಿಕ ವಿಂಟೇಜ್‌ ಕಾರಿನಲ್ಲಿ ಸಿಎಂ ಬೊಮ್ಮಾಯಿ ರೌಂಡ್‌ ಹಾಕಿದ್ದಾರೆ. ಸುಸ್ಥಿರ 'ಪರಿಸರಕ್ಕಾಗಿ ಪ್ರಮುಖ ಜೀವಿಗಳ ಪುನರುತ್ಥಾನ' ಎಂಬುದು ವನ್ಯಜೀವಿ ಸಪ್ತಾಹದ ಧ್ಯೇಯ ವಾಕ್ಯವಾಗಿದೆ.  ಕಾರ್ಯಕ್ರಮದಲ್ಲಿ ಸಚಿವರಾದ ಎಂಟಿಬಿ ನಾಗರಾಜ್, ಸಚಿವ ಗೋವಿಂದ ಕಾರಜೋಳ, ಸಿಎಸ್ ವಂದಿತಾ ಶರ್ಮಾ ಸೇರಿ ಹಲವರು ಭಾಗಿಯಾಗಿದ್ದರು. 

5G Internet in India: ಮೋದಿ ಯುಗದ ಮತ್ತೊಂದು ಮೈಲುಗಲ್ಲು: ಹೇಗಿರಲಿದೆ ಡಿಜಿಟಲ್ ಭವಿಷ್ಯ?