Asianet Suvarna News Asianet Suvarna News

PSI Recruitment Scam ಆಡಿಯೋ ಬಗ್ಗೆಯೂ ತನಿಖೆಯಾಲಿದೆ ಎಂದ ಸಿಎಂ

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೊ ಬಗ್ಗೆ ತನಿಖೆ  ನಡೆಯಲಿದೆ ಎಂದು ಸಿಎಂ ಹೇಳಿದ್ದಾರೆ.

ಬೆಂಗಳೂರು (ಏ.23): ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣದಲ್ಲಿ (PSI Recruitment Scam)  ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (priyank kharge) ಬಿಡುಗಡೆ ಮಾಡಿರುವ ಆಡಿಯೊ ಬಗ್ಗೆ ತನಿಖೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ತಿಳಿಸಿದ್ದಾರೆ.

Belagavi ರಣಬಿಸಿಲಿಗೆ ಹೈರಾಣ ಜಾನುವಾರುಗಳ ಮೂಕ ರೋಧನ!

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಸ್ತುಗಳ ಬಗ್ಗೆ ತನಿಖೆಯಾಗುತ್ತದೆ. ಆಡಿಯೊದಲ್ಲಿ ಏನಿದೆ ಎಂದು ನಾನು ಕೇಳಿಸಿಕೊಂಡಿಲ್ಲ. ಆಡಿಯೊದಲ್ಲಿ ಇಬ್ಬರ ಮಧ್ಯೆ ಮಾತುಕತೆಯಾಗಿದೆ ಎಂದು ಹೇಳಲಾಗುತ್ತಿದ್ದು, ಇಬ್ಬರು ಯಾರು, ಅವರ ಅರ್ಹತೆಯೇನು, ನಿಖರತೆಯೇನು ಎಂದು ತನಿಖೆಯಿಂದ ಹೊರಬರುತ್ತದೆ, ಆಡಿಯೊವನ್ನು ಕೂಡ ತನಿಖೆಗೆ ಒಳಪಡಿಸಲಾಗುವುದು, ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಯಾವುದೇ ಬ್ಯಾಚಿನ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮಗಳಾಗಿದ್ದರೆ ಅದರ ಬಗ್ಗೆಯೂ ತನಿಖೆಯಾಗುತ್ತದೆ. ಅಕ್ರಮವನ್ನು ಬಯಲಿಗೆಳೆದು ಸತ್ಯವನ್ನು ಹೊರ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದವರು ಸ್ಪಷ್ಟಪಡಿಸಿದರು.