Asianet Suvarna News Asianet Suvarna News

PSI Scam: ಸಿಐಡಿ ನೋಟಿಸ್‌ನಿಂದ ಸರ್ಕಾರದ ಅಸಮರ್ಥತೆ ಬಹಿರಂಗ: ಪ್ರಿಯಾಂಕ್ ಖರ್ಗೆ

545 ಪಿಎಸ್‌ಐ ಹುದ್ದೆಗಳ ನೇಮಕಾತಿ (PSI Recruitment Scam) ಪ್ರಕ್ರಿಯೆಯಲ್ಲಿ ಅಕ್ರಮದ ಬಗ್ಗೆ ಸಾಕಷ್ಟುಆರೋಪ ಮಾಡಿದ್ದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ (Priyank Kharge) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ (CID Notice)ನೀಡಿದೆ. ಇದರ ಬೆನ್ನಲ್ಲೇ, ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. 

ಬೆಂಗಳೂರು (ಏ. 25): 545 ಪಿಎಸ್‌ಐ ಹುದ್ದೆಗಳ ನೇಮಕಾತಿ (PSI Recruitment Scam) ಪ್ರಕ್ರಿಯೆಯಲ್ಲಿ ಅಕ್ರಮದ ಬಗ್ಗೆ ಸಾಕಷ್ಟುಆರೋಪ ಮಾಡಿದ್ದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ (Priyank Kharge) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ (CID Notice)ನೀಡಿದೆ. ಇದರ ಬೆನ್ನಲ್ಲೇ, ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. 

ನೀವೇನು ಕತ್ತೆ ಕಾಯ್ತಿದ್ದೀರಾ.? ನನಗ್ಯಾಕೆ ನೋಟಿಸ್ ನೀಡಿದ್ದೀರಾ.? ಪ್ರಿಯಾಂಕ್ ಖರ್ಗೆ ಪ್ರಶ್ನೆ

'ನಾನು ಲಿಖಿತ ದಾಖಲೆಯನ್ನೂ ಕೊಡಬಹುದು, ವಿಚಾರಣೆಗೆ ಹಾಜರಾಗಲೇಬೇಕು ಅಂತಿಲ್ಲ. ನೇಮಕಾತಿ ಮಾಡಿದ ಎಷ್ಟು ಅಧಿಕಾರಿಗಳಿಗೆ ನೊಟೀಸ್ ನೀಡಿದ್ದೀರಿ.? ಆರೋಪಿ ದಿವ್ಯಾ ಮನೆಗೆ ಹೋಗಿದ್ದ ಗೃಹ ಸಚಿವರಿಗೂ ನೋಟಿಸ್ ಕೊಡಿ. ಈ ನೋಟಿಸ್‌ನಿಂದ ಸರ್ಕಾರದ ಅಸಮರ್ಥತೆ ಗೊತ್ತಾಗಲಿದೆ' ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.