Asianet Suvarna News Asianet Suvarna News

ಶಂಕಿತ ಕಿಂಗ್‌ಪಿನ್ ನರೇಶ್ ಜೊತೆ ಕಾಂಟ್ಯಾಕ್ಟ್ ಬೆಳೆದಿದ್ಹೇಗೆ.? ಯುವತಿಯೇ ಬಿಚ್ಚಿಟ್ಟಳು ಅಸಲಿ ವಿಚಾರ!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇನ್ನೂ ಸೀಡಿ ಲೇಡಿ ದೂರು ದಾಖಲಿಸಿರುವುದು, ಮಹತ್ವದ ತಿರುವು ಪಡೆದಿದೆ.

Mar 27, 2021, 10:59 AM IST

ಬೆಂಗಳೂರು (ಮಾ. 27): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇನ್ನೂ ಸೀಡಿ ಲೇಡಿ ದೂರು ದಾಖಲಿಸಿರುವುದು, ಮಹತ್ವದ ತಿರುವು ಪಡೆದಿದೆ. ಇಂದು 4 ನೇ ವಿಡಿಯೋ ಬಿಡುಗಡೆ ಮಾಡಿರುವ ಸೀಡಿ ಲೇಡಿ, ಪೋಷಕರ ಸೇಫ್ಟಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಶಂಕಿತ ಕಿಂಗ್‌ಪಿನ್ ನರೇಶ್ ಮುಲಕ ಡಿಕೆಶಿಯವರನ್ನು ಸಂಪರ್ಕಿಸಲು ಯತ್ನಿಸಿರುವುದಾಗಿ ಹೇಳಿದ್ದಾರೆ. ನಾನು ಕಿಡ್ನಾಪ್ ಆಗಿಲ್ಲ, ಆರಾಮಾಗಿದೀನಿ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಕುತೂಹಲ ಹೆಚ್ಚಿಸಿದೆ. 

'ನನಗಾಗ್ತಿರುವ ಚಿತ್ರಹಿಂಸೆಗೆ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನಿಸ್ತಾ ಇದೆ'