Asianet Suvarna News Asianet Suvarna News

15 ತಿಂಗಳ ಹಸುಗೂಸು ಬಿಟ್ಟು ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ನರ್ಸ್‌!

ಕೊರೋನಾ ಅಟ್ಟಹಾಸ ಆರಂಭವಾದಾಗಿನಿಂದ ವಿಶ್ವದೆಲ್ಲೆಡೆ ಸೋಂಕಿತರ ಚಿಕಿತ್ಸೆಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ವೈದ್ಯರು ಹಾಗೂ ನರ್ಸ್‌ಗಳ ಮಹತ್ವ ಜನರಿಗೆ ಅರಿವಾಗಿದೆ. ಹೀಗಾಗೇ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ತಮ್ಮ ವೈಯುಕ್ತಿಕ ಸುಖ, ಸಂತೋಷವನ್ನು ಬದಿಗಿಟ್ಟ ಕೊರೋನಾ ವಾರಿಯರ್ಸ್‌ ಸೋಂಕಿತರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

First Published May 17, 2020, 4:50 PM IST | Last Updated May 17, 2020, 4:54 PM IST

ವಿಜಯಪುರ (ಮೇ 17) ಕೊರೋನಾ ಅಟ್ಟಹಾಸ ಆರಂಭವಾದಾಗಿನಿಂದ ವಿಶ್ವದೆಲ್ಲೆಡೆ ಸೋಂಕಿತರ ಚಿಕಿತ್ಸೆಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ವೈದ್ಯರು ಹಾಗೂ ನರ್ಸ್‌ಗಳ ಮಹತ್ವ ಜನರಿಗೆ ಅರಿವಾಗಿದೆ. ಹೀಗಾಗೇ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ತಮ್ಮ ವೈಯುಕ್ತಿಕ ಸುಖ, ಸಂತೋಷವನ್ನು ಬದಿಗಿಟ್ಟ ಕೊರೋನಾ ವಾರಿಯರ್ಸ್‌ ಸೋಂಕಿತರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ನೋಡಿ |  ಶಾಲೆ ಪುನರಾರಂಭ: ಸಚಿವ ಸುರೇಶ್ ಕುಮಾರ್ ಹೇಳಿದ್ದಿಷ್ಟು...

ಸದ್ಯ ವಿಜಯಪುರದ ನರ್ಸ್‌ ಒಬ್ಬಳು ತನ್ನ ಹದಿನೈದು ತಿಂಗಳ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಕೊರೋನಾ ಸೋಂಕಿತರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದು, ಪುಟ್ಟ ಕಂದ ತಾಯಿಗಾಗಿ ಹಂಬಲಿಸುತ್ತಿರುವ ದೃಶ್ಯ ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಕಂದ ಕಣ್ಣೆದುದಿದ್ದರೂ ಮುದ್ದಾಡಲಾಗದೆ ತಾಯಿ ಪರದಾಡುತ್ತಿದ್ದರೆ, ಅತ್ತ ಪುಟ್ಟ ಕಂದ ತಾಯಿಯನ್ನು ಕಂಡ ಕೂಡಲೇ ಆಕೆ ಬರುವಳೆಂದು ಖುಷಿ ಪಡುತ್ತಿರುವ ದೃಶ್ಯ ಎಲ್ಲರನ್ನೂ ಭಾವುಕರನ್ನಾಗಿಸಿದೆ.

ಕಾರ್ಮಿಕರಿಗಾಗಿ ರಸ್ತೆ ಬದಿಯಲ್ಲೇ ಮಲಗಿದ ಶಾಸಕ ನಡಹಳ್ಳಿ..!

"