Asianet Suvarna News Asianet Suvarna News

Cabinet Reshuffle: ಏ. 29 ರಂದು ಸಿಎಂ ದಿಲ್ಲಿ ಭೇಟಿ: ಸಂಪುಟ ಬಗ್ಗೆ ಚರ್ಚೆ ನಡೆವ ಸಾಧ್ಯತೆ

ರಾಜ್ಯ ರಾಜಕೀಯದಲ್ಲಿ ಸಂಪುಟ ಸರ್ಜರಿ (Cabinet Reshuffle) ಗರಿಗೆದರಿದೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಚ್‌ಗಳ ಮುಖ್ಯ ನ್ಯಾಯಾಧೀಶರ ಸಮ್ಮೇಳನದ ಹಿನ್ನೆಲೆಯಲ್ಲಿ ಇದೇ ತಿಂಗಳ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ದೆಹಲಿಗೆ (New Delhi) ತೆರಳಲಿದ್ದಾರೆ. 

ಬೆಂಗಳೂರು (ಏ. 23): ರಾಜ್ಯ ರಾಜಕೀಯದಲ್ಲಿ ಸಂಪುಟ ಸರ್ಜರಿ (Cabinet Reshuffle) ಗರಿಗೆದರಿದೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಚ್‌ಗಳ ಮುಖ್ಯ ನ್ಯಾಯಾಧೀಶರ ಸಮ್ಮೇಳನದ ಹಿನ್ನೆಲೆಯಲ್ಲಿ ಇದೇ ತಿಂಗಳ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ದೆಹಲಿಗೆ (New Delhi) ತೆರಳಲಿದ್ದಾರೆ. ಈ ಭೇಟಿಯ ವೇಳೆ ಬೊಮ್ಮಾಯಿ ಅವರು ಸಂಪುಟ ಕಸರತ್ತಿನ ಬಗ್ಗೆ ಪಕ್ಷದ ವರಿಷ್ಠರು ಭೇಟಿಗೆ ಸಮಯ ನೀಡಿದರೆ ಮಾತುಕತೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಂಪುಟ ಕಸರತ್ತಿನ ಬಗ್ಗೆ ಚರ್ಚಿಸಲು ಪಕ್ಷದ ವರಿಷ್ಠ ನಾಯಕರು ಕರೆದಾಗ ದೆಹಲಿಗೆ ಹೋಗುತ್ತೇನೆ ಎಂಬುದಾಗಿ ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಾಗಿ, ಈ ದೆಹಲಿ ಭೇಟಿ ವೇಳೆ ಸಂಪುಟ ಬಗ್ಗೆ ಸಮಾಲೋಚನೆ ನಡೆಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

Video Top Stories