Asianet Suvarna News Asianet Suvarna News

ಶ್ರೀರಾಮ ಸೇನೆ - ಸಿದ್ದರಾಮಯ್ಯ ನಡುವೆ ಬುಲ್ಡೋಜರ್‌ ವಾರ್!

ಶ್ರೀರಾಮ ಸೇನೆ - ಸಿದ್ದರಾಮಯ್ಯ ನಡುವೆ ಬುಲ್ಡೋಜರ್‌ ವಾರ್ ತೀವ್ರವಾಗಿದೆ. ಸಿದ್ದರಾಮಯ್ಯನವರ ಮೇಲೆಯೇ ಬುಲ್ಡೋಜರ್ ಹರಿಸಬೇಕೆಂದು ಶ್ರೀರಾಮ ಸೇನೆ ಮುಖಂಡ ಆಂದೋಲಾ ಶ್ರೀ ಹೇಳಿದ್ದಾರೆ
 

ಬೆಂಗಳೂರು (ಏ.28): ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿದ್ದ ವೇಳೆ 24 ಹಿಂದೂಗಳ ಹತ್ಯೆಯಾಗಿತ್ತು. ಸಿದ್ಧರಾಮಯ್ಯ  ಅವರ ಮೇಲೆ ಬುಲ್ಡೋಜರ್ (Bulldozer) ಹರಿಸಬೇಕು ಎಂದು ಶ್ರೀರಾಮ ಸೇನೆ (Sri Rama Sene) ರಾಜ್ಯಾಧ್ಯಕ್ಷ ಆಂದೋಲಾ ಶ್ರಿ (Aandola Shree) ಹೇಳಿದ್ದಾರೆ.

ಶ್ರೀರಾಮ ಸೇನೆ ಮೇಲೆ ಬುಲ್ಡೋಜರ್ ಹತ್ತಿಸಬೇಕು ಅಂದಿದ್ರು ಸಿದ್ಧರಾಮಯ್ಯ, ನಮ್ಮ ಮೇಲಲ್ಲ, ನಿಮ್ಮ ಮೇಲೆ ಬುಲ್ಡೋಜರ್ ಹತ್ತಿಸಬೇಕು. ಶ್ರೀರಾಮ ಸೇನೆ ದೇಶಭಕ್ತ ಸಂಘಟನೆ ಎಂದು ಆಂದೋಲಾ ಶ್ರೀ ಹೇಳಿದ್ದಾರೆ. ಆ ಮೂಲಕ ಸಿದ್ಧರಾಮಯ್ಯ ವಿರುದ್ಧ ಆಂದೋಲಾ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿ ಯಾವತ್ತೂ ರಾಷ್ಟ್ರ ಭಾಷೆ ಆಗಿಲ್ಲ: ದೇವಗನ್‌ ಹಿಂದಿ ಏಟಿಗೆ ಸಿದ್ದರಾಮಯ್ಯ ತಿರುಗೇಟು

ರಾಜ್ಯದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಮಾಡಬೇಕು ಎಂದು ಶ್ರೀರಾಮ ಸೇನೆ ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ಧರಾಮಯ್ಯ, ಶ್ರೀರಾಮ ಸೇನೆ ಮೇಲೆಯೇ ಬುಲ್ಡೋಜರ್ ಹತ್ತಿಸಬೇಕು ಎಂದು ಹೇಳಿದ್ದರು. ಸಿದ್ಧರಾಮಯ್ಯ ಮಾತಿಗೆ ಈಗ ಆಂದೋಲಾ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.

Video Top Stories