Asianet Suvarna News Asianet Suvarna News

3 ಅಂತಸ್ತಿನ ಕಟ್ಟಡ ಕುಸಿತ; ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

ವಿಲ್ಸನ್‌ಗಾರ್ಡನ್ ಬಳಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಈ ಕಟ್ಟಡ ಬಿದ್ದು ಹೋಗುವ ಸ್ಥಿತಿಯಲ್ಲಿತ್ತು. ಇದನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ, ತೆರವುಗೊಳಿಸದೇ, ನಿರ್ಲಕ್ಷ್ಯ ವಹಿಸಿತ್ತು.

Sep 27, 2021, 5:08 PM IST

ಬೆಂಗಳೂರು (ಸೆ. 27): ವಿಲ್ಸನ್‌ಗಾರ್ಡನ್ ಬಳಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಈ ಕಟ್ಟಡ ಬಿದ್ದು ಹೋಗುವ ಸ್ಥಿತಿಯಲ್ಲಿತ್ತು. ಇದನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ, ತೆರವುಗೊಳಿಸದೇ, ನಿರ್ಲಕ್ಷ್ಯ ವಹಿಸಿತ್ತು. ಈ ಕಟ್ಟಡದಲ್ಲಿ 70 ಮೆಟ್ರೋ ಕಾರ್ಮಿಕರು ವಾಸವಾಗಿದ್ದರು. ಕಟ್ಟಡ ಕುಸಿಯುವಾಗ  ಯಾರೂ ಇಲ್ಲದೇ ಇದ್ದಿದ್ದರಿಂದ ಅನಾಹುತ ತಪ್ಪಿದೆ. ಇದೀಗ ಮಾಲೀಕ ಸುರೇಶ್‌ಗಾಗಿ ಹುಡುಕಾಟ ನಡೆದಿದೆ. 

ಕುಸಿದು ಬಿತ್ತು ಮೂರಂತಸ್ತಿನ ಕಟ್ಟಡ, ತಪ್ಪಿತು ಭಾರೀ ದುರಂತ