ಹೈಕಮಾಂಡ್ ಅಂಗಳದಲ್ಲಿ ಸಿಎಂ ಬಿಎಸ್‌ವೈ ಉರುಳಿಸಿದ್ದು ಅದ್ಯಾವ ದಾಳ..?
- ರಾಜೀನಾಮೆಗೆ ಯಾರೂ ಸೂಚಿಸಿಲ್ಲ, ರಾಜೀನಾಮೆ ಪ್ರಶ್ನೆ ಇಲ್ಲ: ಸಿಎಂ
- ದಿಲ್ಲಿಯಿಂದ ಬಿಎಸ್‌ವೈ ವಾಪಸ್, ವದಂತಿಗಳಿಗೆ ತಾತ್ಕಾಲಿಕವಾಗಿ ತೆರೆ
- ಜು.26ರ ನಂತರ ಚಟುವಟಿಕೆ ಬಿರುಸು?
ಬೆಂಗಳೂರು (ಜು. 18): ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಕುರಿತಾದ ಸಸ್ಪೆನ್ಸ್ ಇನ್ನೂ ಮುಂದುವರಿದಿದೆ. ಒಂದೆಡೆ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಯಾರೂ ಹೇಳಿಲ್ಲ. ಹಾಗಾಗಿ, ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆ ವಿಚಾರವಾಗಿ ಗಮನಹರಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ನನ್ನ ಮೇಲಿದೆ ಎಂದೂ ಅವರು ತಿಳಿಸಿದ್ದಾರೆ. ದೆಹಲಿ ಭೇಟಿ ಬಳಿಕ ಸಿಎಂ ಇನ್ನಷ್ಟು ಬಲ ಬಂದಂತಾಗಿದೆ. ಹಾಗಾದರೆ ಸಿಎಂ ಉರುಳಿಸಿದ್ದು ಅದ್ಯಾವ ದಾಳ..? ಅಲ್ಲಿ ನಡೆದಿದ್ದೇನು..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!