Asianet Suvarna News Asianet Suvarna News

ಬಸ್ಸಿಲ್ಲ, ಬೆಂಗ್ಳೂರಿನಲ್ಲಿ ವಿಮಾನಕ್ಕಿಂತಲೂ ಆಟೋಯಾನ ದುಬಾರಿ!

ಬಿಎಂಟಿಸಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಕೆಲ ಆಟೋ ಚಾಲಕರು ಸಂದರ್ಭದ ಲಾಭ ಪಡೆಯುತ್ತಿದ್ದಾರೆ. ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಮೆಜೆಸ್ಟಿಕ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ 2 ಸಾವಿರ ರೂಪಾಯಿ ಕೇಳುತ್ತಿದ್ದಾರಂತೆ. 

First Published Dec 12, 2020, 11:24 AM IST | Last Updated Dec 12, 2020, 12:00 PM IST

ಬೆಂಗಳೂರು (ಡಿ. 12): ಬಿಎಂಟಿಸಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಕೆಲ ಆಟೋ ಚಾಲಕರು ಸಂದರ್ಭದ ಲಾಭ ಪಡೆಯುತ್ತಿದ್ದಾರೆ. ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಮೆಜೆಸ್ಟಿಕ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ 2 ಸಾವಿರ ರೂಪಾಯಿ ಕೇಳುತ್ತಿದ್ದಾರಂತೆ. ಅನುಕೂಲಸ್ಥರು ದುಬಾರಿಯಾದರೂ ಅನಿವಾರ್ಯ ಎಂದು ಹೋದರೆ, ಅಷ್ಟು ಕೊಡಲು ಸಾಧ್ಯವಿಲ್ಲದವರು, ಚಾಲಕರನ್ನು ಶಪಿಸುವ ದೃಶ್ಯ ಸಾಮಾನ್ಯವಾಗಿದೆ. ಮೆಜೆಸ್ಟಿಕ್‌ನಲ್ಲಿ ಕೆಲವು ಆಟೋ ಚಾಲಕರು, ಪ್ರಯಾಣಿಕರು ಮಾತನಾಡಿದ್ದಾರೆ. 

ಬಸ್ಸಿಲ್ಲದಿದ್ರೆ ಏನಾಯ್ತು? ನಾವಿದ್ದೀವಲ್ಲ ಎಂದ ನಮ್ಮ ಮೆಟ್ರೋ; ಪ್ರಯಾಣಿಕರಿಗಾಗಿ ಹೆಚ್ಚುವರಿ ಸಂಚಾರ

Video Top Stories