Asianet Suvarna News Asianet Suvarna News

BMTC ಗೆ ಇಂ 'ಧನ' ಪ್ರಾಬ್ಲಂ, ಸಂಚಾರದಲ್ಲಿ ವ್ಯತ್ಯಯ, ಪ್ರಯಾಣಿಕರಿಗೆ ತಟ್ಟಲಿದೆ ಬಿಸಿ..!

ಚಿಲ್ಲರೆ ಬೆಲೆಗೆ ದೊಡ್ಡ ಪ್ರಮಾಣದಲ್ಲಿ ಡೀಸೆಲನ್ನು ಬಿಎಂಟಿಸಿಗೆ ಪೂರೈಕೆ ಮಾಡದಂತೆ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ತನ್ನ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ಗಳಿಗೆ ಫರ್ಮಾನು ಹೊರಡಿಸಿದ್ದು, ಇನ್ನು ಮುಂದೆ ಎಲ್ಲ ಬಸ್‌ಗಳು ಬಂಕ್‌ಗಳಲ್ಲಿಯೇ ಡೀಸೆಲ್‌ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಬೆಂಗಳೂರು (ಜೂ.27): ಚಿಲ್ಲರೆ ಬೆಲೆಗೆ ದೊಡ್ಡ ಪ್ರಮಾಣದಲ್ಲಿ ಡೀಸೆಲನ್ನು ಬಿಎಂಟಿಸಿಗೆ ಪೂರೈಕೆ ಮಾಡದಂತೆ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ತನ್ನ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ಗಳಿಗೆ ಫರ್ಮಾನು ಹೊರಡಿಸಿದ್ದು, ಇನ್ನು ಮುಂದೆ ಎಲ್ಲ ಬಸ್‌ಗಳು ಬಂಕ್‌ಗಳಲ್ಲಿಯೇ ಡೀಸೆಲ್‌ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಶಿಂಧೆ ಬಣ ಸೇರಿದ ಮತ್ತೊಂದು ಶಾಸಕ, ಮುಂಬೈಯಲ್ಲಿ ಸೆ. 144 ಜಾರಿ!

ಕಳೆದ ಮೂರು ತಿಂಗಳ ಹಿಂದೆ ಸಗಟು ಡೀಸೆಲ್‌ ವ್ಯಾಪಾರದಲ್ಲಿ ಪ್ರತಿ ಲೀಟರ್‌ಗೆ .30 ಹೆಚ್ಚಳ ಮಾಡಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಆದೇಶಿಸಿತ್ತು. ಇದರಿಂದ ಬಿಎಂಟಿಸಿಗೆ ಕೋಟ್ಯಂತರ ರುಪಾಯಿ ಹೊರೆ ಬಿದ್ದಿತ್ತು. ಇದನ್ನು ತಪ್ಪಿಸಲು ಬಂಕ್‌ಗಳಿಂದ ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್‌ ಖರೀದಿಗೆ ಮುಂದಾಗಿತ್ತು. ಇದಕ್ಕೆ ಪೂರಕವಾಗಿ ಬಂಕ್‌ ಮಾಲಿಕರು ಬಿಎಂಟಿಸಿ ಡಿಪೋಗೆ ಇಂಧನ ಪೂರೈಸುತ್ತಿದ್ದರು. ಆದರೆ, ಇದೀಗ ಎಚ್‌ಪಿಸಿಎಲ್‌ ಚಿಲ್ಲರೆ ಬೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಡೀಸೆಲ್‌ ಖರೀದಿ ಮಾಡುವವರಿಗೆ ಪೂರೈಕೆ ಮಾಡದಂತೆ ನಿರ್ಬಂಧ ವಿಧಿಸಿದೆ. 

ಟಿಪ್ಪು ಸುಲ್ತಾನ್ ಅಂದ್ರೆ ಉರಿದು ಬೀಳೋದ್ಯಾಕೆ..? ಪ್ರತಾಪ್ ಸಿಂಹ ಮುಸ್ಲಿಂ ವಿರೋಧಿಯಾ.?

ಪ್ರಸ್ತುತ ಎಲ್ಲ ಡಿಪೋಗಳಲ್ಲಿ ಮುಂದಿನ ಮೂರು ದಿನಗಳಿಗೆ ಅಗತ್ಯವಿರುವ ಡೀಸೆಲ್‌ ದಾಸ್ತಾನು ಮಾಡಲಾಗಿದೆ. ಮೂರು ದಿನ ಡೀಸೆಲ್‌ ಪೂರೈಕೆ ಆಗದಿದ್ದರೂ ಬಸ್‌ಗಳಿಗೆ ಸಮಸ್ಯೆ ಇಲ್ಲ. ಆ ಬಳಿಕ ಸಮಸ್ಯೆ ಎದುರಾಗುವ ಸಾಧ್ಯೆಯಿದೆ. 

Video Top Stories