Belagavi Session: ವಕ್ಫ್ ಹೋರಾಟವನ್ನು ನಡುನೀರಿನಲ್ಲಿ ಬಿಟ್ಟ ಬಿಜೆಪಿ, ಅಧಿವೇಶನದಲ್ಲೂ ಹಾರಾಟ ಡೌಟ್?
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯ ವಕ್ಫ್ ಹೋರಾಟ ಅನುಮಾನಕ್ಕೆ ಒಳಗಾಗಿದೆ. ಹೋರಾಟದ ಯೋಜನೆ ರೂಪಿಸಿದ್ದರೂ, ಪಕ್ಷದ ಆಂತರಿಕ ಭಿನ್ನಮತದಿಂದಾಗಿ ಗೊಂದಲದಲ್ಲಿದೆ.
ಬೆಂಗಳೂರು (ಡಿ.7): ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಕೇಸರಿ ಪಡೆಯ ವಕ್ಫ್ ಹೋರಾಟ ಅನುಮಾನವಾಗಿದೆ. ವಕ್ಫ್ ವಿಚಾರದಲ್ಲಿ ಸ್ಪಷ್ಟ ನಿಲುವಿಗೆ ಬರಲು ಸ್ವತಃ ಬಿಜೆಪಿ ಎಡವಿದೆ.
ಅಧಿವೇಶನ ಹತ್ತಿರವಾದರೂ ವಕ್ಫ್ ವಿಚಾರದಲ್ಲಿ ಹೋರಾಟ ಮಾಡುವ ಲಕ್ಷಣಗಳೇ ತೋರುತ್ತಿಲ್ಲ. ಈ ಮೊದಲು ಸದನದ ಒಳಗೂ - ಹೊರಗೂ ಹೋರಾಟ ಎಂದು ಬಿಜೆಪಿ ಹೇಳಿತ್ತು. ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ಲಾನ್ ಮಾಡಿದ್ದ ಕೆಸರಿ ಪಡೆ . ವಕ್ಫ್, ಕಾನೂನು ಸುವ್ಯವಸ್ಥೆ ವಿರುದ್ಧ ಸಮರಕ್ಕೆ ಬಿಜೆಪಿ ಸಮರಕ್ಕೆ ಸಿದ್ಧವಾಗಿತ್ತು.
Hassan: ವೀಕೆಂಡ್‌ಗೆ ಹೊರಟಿದ್ದ ಸ್ನೇಹಿತರ ಕಾರು ಪಲ್ಟಿ, ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು!
ಆದರೆ, ಅಜೆಂಡಾ ಸೆಟ್ ಮಾಡುವಲ್ಲಿ ಬಿಜೆಪಿ ಎಡವಿದೆ. ಈ ವಿಚಾರದಲ್ಲಿ ಸ್ಪಷ್ಟವಾಗಿ ನಿರ್ಧಾರಕ್ಕೆ ಬರಲು ಪಕ್ಷದಲ್ಲಿಯೇ ನಿರಾಸಕ್ತಿ ಎದುರಾಗಿದೆ. ಹೋರಾಟದ ಮೊಳಗಿಸಿದ್ದ ಬಿಜೆಪಿ ಆ ಬಳಿಕ ಎದುರಿಸಿದ ಭಿನ್ನಮತದ ಕಾರಣದಿಂದಾಗಿ ಈಗ ಹೋರಾಟದ ದಿಕ್ಕೇ ಬದಲಾಗಿದೆ.