Asianet Suvarna News Asianet Suvarna News

ಬಿಜೆಪಿ ಲೂಟಿ ಹೊಡೆದ ಹಣವನ್ನು ಹಾನಗಲ್‌ನಲ್ಲಿ ಹಂಚುತ್ತಿದೆ: ಸಿದ್ದರಾಮಯ್ಯ

ಹಾನಗಲ್, ಸಿಂದಗಿಯಲ್ಲಿ ಉಪಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಮೂರೂ ಪಕ್ಷದವರು ಒಬ್ಬರ ಮೇಲೊಬ್ಬರು ಕೆಸರೆರಾಟ ಮಾಡುತ್ತಿದ್ದಾರೆ. ಇಂದು ಸಿದ್ದರಾಮಯ್ಯ ಹಾನಗಲ್‌ನಲ್ಲಿ ಪ್ರಚಾರ ನಡೆಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸವಾಲು ಹಾಕಿದ್ಧಾರೆ.

 

First Published Oct 22, 2021, 4:40 PM IST | Last Updated Oct 22, 2021, 4:40 PM IST

ಬೆಂಗಳೂರು (ಅ. 22): ಹಾನಗಲ್, ಸಿಂದಗಿಯಲ್ಲಿ ಉಪಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಮೂರೂ ಪಕ್ಷದವರು ಒಬ್ಬರ ಮೇಲೊಬ್ಬರು ಕೆಸರೆರಾಟ ಮಾಡುತ್ತಿದ್ದಾರೆ. ಇಂದು ಸಿದ್ದರಾಮಯ್ಯ ಹಾನಗಲ್‌ನಲ್ಲಿ ಪ್ರಚಾರ ನಡೆಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸವಾಲು ಹಾಕಿದ್ಧಾರೆ.

ನಿಮ್ಮ ಕಾಲದಲ್ಲಿ ಹಾನಗಲ್‌ಗೆ ಒಂದು ಮನೆ ಮಂಜೂರಾಗಿದ್ರೆ ತೋರಿಸ್ರಿ: ಬೊಮ್ಮಾಯಿಗೆ ಸಿದ್ದು ಸವಾಲ್!

ಹಾನಗಲ್‌ನಲ್ಲಿ ಬಿಜೆಪಿ ಸೋಲುವುದು ಖಂಡಿತಾ ಎಂದು ಅವರಿಗೂ ಗೊತ್ತಾಗಿದೆ. ಹಾಗಾಗಿ ಮತದಾರರಿಗೆ ದುಡ್ಡು ಕೊಡಲು ಶುರು ಮಾಡಿದ್ದಾರೆ. ಅದು ಕಷ್ಟಪಟ್ಟು ಬೆವರು ಸುರಿಸಿ ಗಳಿಸಿದ ಹಣವಲ್ಲ. ಲೂಟಿ ಮಾಡಿದ ಹಣ. ಬೊಮ್ಮಾಯಿ ಒಣ ಮಾತುಗಳಿಗೆ ಬಲಿಯಾಗಬೇಡಿ' ಎಂದು ಸಿದ್ದರಾಮಯ್ಯ ಹಾನಗಲ್‌ನಲ್ಲಿಂದು ಹೇಳಿದ್ಧಾರೆ.