Asianet Suvarna News Asianet Suvarna News

ಧರ್ಮ ದಂಗಲ್: ರಾಜ್ಯದ ಮಸೀದಿ, ಮೌಲ್ವಿಗಳ ಸರ್ವೆಗೆ ಮುಂದಾಗುತ್ತಾ ಸರ್ಕಾರ..?

ಹುಬ್ಬಳ್ಳಿ ಕೋಮುಗಲಭೆ (Hubballi Riot) ಹಿನ್ನಲೆಯಲ್ಲಿ ಈಗ ಬಿಜೆಪಿ ಶಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 'ಮಸೀದಿ, ಮೌಲ್ವಿಗಳ ಸರ್ವೆಯಾಗಬೇಕು. ಅಲ್ಲಿಂದಲೇ ಇಂತಹ ಹಿಂಸಾಚಾರ ನಡೆಯುತ್ತಿದೆ. ಮೌಲ್ವಿಗಳು ಎಲ್ಲಿಂದ ಬಂದವರು, ಅವರ ಹಿನ್ನಲೆಯೇನು..? ಎಂದು ಸಮೀಕ್ಷೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

ಬೆಂಗಳೂರು (ಏ. 21): ಹುಬ್ಬಳ್ಳಿ ಕೋಮುಗಲಭೆ (Hubballi Riot) ಹಿನ್ನಲೆಯಲ್ಲಿ ಈಗ ಬಿಜೆಪಿ ಶಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 'ಮಸೀದಿ, ಮೌಲ್ವಿಗಳ ಸರ್ವೆಯಾಗಬೇಕು. ಅಲ್ಲಿಂದಲೇ ಇಂತಹ ಹಿಂಸಾಚಾರ ನಡೆಯುತ್ತಿದೆ. ಮೌಲ್ವಿಗಳು ಎಲ್ಲಿಂದ ಬಂದವರು, ಅವರ ಹಿನ್ನಲೆಯೇನು..? ಎಂದು ಸಮೀಕ್ಷೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಹಿಂದೂ- ಮುಸ್ಲಿಂ ಮುಖಂಡರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

'ಮಸೀದಿ, ಮೌಲ್ವಿಗಳ ಸಮೀಕ್ಷೆ ಸರ್ಕಾರ ಮಾಡಲಿ. ನಾವು ಮಸೀದಿಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವುದಿಲ್ಲ. ಇನ್ನೊಬ್ಬರನ್ನು ಕೊಲ್ಲಬೇಕು ಎಂದು ಮುಸಲ್ಮಾನ ಧರ್ಮ ಹೇಳುವುದಿಲ್ಲ. ನಮ್ಮ ಸಮುದಾಯ ಇದನ್ನು ಖಂಡಿಸುವುದಿಲ್ಲ. ಸರ್ವೆ ಮಾಡಲಿ. ಅಭ್ಯಂತರ ಮಾಡಲ್ಲ' ಎಂದು ಮುಸ್ಲಿಂ ಮುಖಂಡ ರಿಯಾಜ್ ಅಹ್ಮದ್ ಹೇಳಿದರು. ಇದೇ ರೀತಿ ಹಿಂದೂಪರ ಮುಖಂಡರು, ಶಾಸಕರನ್ನು ಮಾತನಾಡಿಸಿದಾಗ ಅವರೂ ಕೂಡಾ ಸರ್ವೆಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮಕ್ಕೆ ಮುಂದಾಗುತ್ತದೆ..? ಎಂದು ನೋಡಬೇಕಿದೆ.