Big 3 Impact: ತಾಯಿ ಹಾಗೂ ಬುದ್ದಿಮಾಂದ್ಯ ಮಗಳಿಗೆ ಆಸರೆಯಾಯ್ತು ಬಿಗ್‌ 3!

ಈ ದೃಶ್ಯ ನೋಡಿದ್ರೆ ನಿಮ್ಮ ಕರಳು ಕಿತ್ತುಕೊಂಡು ಬರುತ್ತೆ. ಅಲ್ಲಿನ ಅಧಿಕಾರಿಗಳು ಬದುಕಿದ್ದಾರೋ, ಇಲ್ಲ ಸತ್ತಿದ್ದಾರೋ ಅನ್ನಿಸಿಬಿಡುತ್ತೆ. ಸರ್ಕಾರದ ಗ್ಯಾರಂಟಿಗಳು ಕಟ್ಟ ಕಡೆಯವರಿಗೂ ಸಿಗಬೇಕು ಅನ್ನೋದು ಸರ್ಕಾರದ ಆಶಯ.

First Published Sep 6, 2023, 1:59 PM IST | Last Updated Sep 6, 2023, 1:59 PM IST

ಶಿವಮೊಗ್ಗ (ಸೆ.06): ಈ ದೃಶ್ಯ ನೋಡಿದ್ರೆ ನಿಮ್ಮ ಕರಳು ಕಿತ್ತುಕೊಂಡು ಬರುತ್ತೆ. ಅಲ್ಲಿನ ಅಧಿಕಾರಿಗಳು ಬದುಕಿದ್ದಾರೋ, ಇಲ್ಲ ಸತ್ತಿದ್ದಾರೋ ಅನ್ನಿಸಿಬಿಡುತ್ತೆ. ಸರ್ಕಾರದ ಗ್ಯಾರಂಟಿಗಳು ಕಟ್ಟ ಕಡೆಯವರಿಗೂ ಸಿಗಬೇಕು ಅನ್ನೋದು ಸರ್ಕಾರದ ಆಶಯ. ಆದ್ರೆ ಅಲ್ಲಿ ಅವರಿಗೆ ಏನೂ ಸಿಗ್ತಿಲ್ಲ. ಹಾಗಾದ್ರೆ ಈ ಸ್ಪೆಷಲ್ ರಿಪೋರ್ಟ್ ನೋಡಿ. ಯೆಸ್ ಈ ದೃಶ್ಯ ನೋಡಿದ್ರೆ ಕಲ್ಲು ಹೃದಯ ಇರೋ ವ್ಯಕ್ತಿ ಕೂಡ ಕರಗಿ ನೀರಾಗಿ ಹೋಗ್ತಾರೆ. ಒಂದೊಂದು ದೃಶ್ಯವೂ ಮನ ಮಿಡಿಯುವಂತಿದೆ. ತಾಯಿ-ಮಗಳ ಬದುಕಿನ ಬಂಡಿಯನ್ನ ನೋಡಿದ್ರೆ ಕಣ್ಣೀರು ಬರದೇ ಇರಲ್ಲ. 

ಅಷ್ಟಕ್ಕೂ ದೃಶ್ಯ ಕಂಡು ಬಂದಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನ ಸಂಪಳ್ಳಿ‌ ಗ್ರಾಮದಲ್ಲಿ. ಶಶಿಕಲಾ ಎಂಬ ಮಹಿಳೆ ತನ್ನ 20 ವರ್ಷದ ಬುದ್ದಿಮಾಂದ್ಯ ಮಗಳಾದ ಪೂಜಾಳೊಂದಿಗೆ, ಕಳೆದ 6 ವರ್ಷಗಳಿಂದ ಸಭಾಭವನ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾರೆ. ತಾಯಿ ಶಶಿಕಲಾ ಅಲ್ಪಸ್ವಲ್ಪ ಕಿವಿ ಕೇಳುತ್ತೆ. ಮಗಳು ಪೂಜ್ಯಾಳ ಆರೈಕೆಯಲ್ಲಿಯೇ ಜೀವನ ದುಡುತ್ತಿದ್ದಾಳೆ ಈ ಮಹಾತಾಯಿ. ಈ ಸಭಾ ಭವನವು ಕಸ ವಿಲೇವಾರಿ ಸ್ವಚ್ಛ ಸಂಕೀರ್ಣ ಘಟಕದಂತೆ ಕಾಣುತ್ತದೆ. ಇಲ್ಲಿ ಯಾವುದೇ ಶೌಚಾಲಯವಿಲ್ಲ. 

ವಿದ್ಯುತ್ ಸಂಪರ್ಕವಿಲ್ಲ, ನೀರಿನ ವ್ಯವಸ್ಥೆಯಂತೂ ಮೊದಲೇ ಇಲ್ಲ. ಕತ್ತಲಲ್ಲಿ ಕಾಲ ಕಳೆಯುತ್ತಾ ನರಕಯಾತನೆ ಅನುಭವಿಸುತ್ತಿದ್ದಾರೆ ತಾಯಿ ಮಕ್ಕಳು. ಹೊಸನಗರದ ಮೇಲಿನ ಸಂಪಳ್ಳಿ ಗ್ರಾಮದಲ್ಲಿ ಶಶಿಕಲಾಗೆ ಸೇರಿದ ಮನೆಯಿದೆ, ಅದು ಬೀಳುವ ಹಂತ ತಲುಪಿದೆ. ಮಗಳನ್ನು ಸಭಾಭವನದಲ್ಲಿ ಬಿಟ್ಟು ಮನೆ ಮನೆ ಅಲೆದು ಊಟ ತಂದು ಮಗಳಿಗೆ ತಿನ್ನಿಸುವ ತಾಯಿ ಶಶಿಕಲಾ ಪರಿಸ್ಥಿತಿ ಶೋಚನೀಯ. ಆದ್ರೆ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮೀ ಯೋಜನೆ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕೆನ್ನುವ ರಾಜ್ಯ ಸರ್ಕಾರ ಕಣ್ಣೀಗೆ ಇವರು ಕಾಣಲೇ ಇಲ್ವಾ?. ಇನ್ನಾದ್ರೂ ಇವರನ್ನು ಗುರುತಿಸಿ ಅಧಿಕಾರಿಗಳು ಸವಲತ್ತು ಒದಗಿಸಬೇಕಿದೆ.