Asianet Suvarna News Asianet Suvarna News

ಸರ್ಕಾರಿ ಜಮೀನು ಪಡೆಯಲು 22 ವರ್ಷಗಳಿಂದ ಸರ್ಕಾರಿ ಕಚೇರಿಗೆ ಅಲೆದಾಟ; ಮಾಜಿ ಯೋಧನ ಗೋಳು ಕೇಳೋರಿಲ್ಲ

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಾಜಿ ಸೈನಿಕ ಹೊನ್ನಪ್ಪ ಕಾಟಪ್ಪನವರ್ ಕಳೆದ 22 ವರ್ಷಗಳಿಂದ ಒಂದು ಸೈಟ್‌ಗಾಗಿ ಸರ್ಕಾರಿ ಕಚೇರಿಯನ್ನು ಅಲೆಯುತ್ತಿದ್ದಾರೆ. ಆದರೆ ಒಂದಿಂಚೂ ಭೂಮಿ ಕೂಡಾ ಇವರಿಗೆ ಸಿಕ್ಕಿಲ್ಲ. 

ಬೆಂಗಳೂರು (ಡಿ. 16): ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಾಜಿ ಸೈನಿಕ ಹೊನ್ನಪ್ಪ ಕಾಟಪ್ಪನವರ್ ಕಳೆದ 22 ವರ್ಷಗಳಿಂದ ಒಂದು ಸೈಟ್‌ಗಾಗಿ ಸರ್ಕಾರಿ ಕಚೇರಿಯನ್ನು ಅಲೆಯುತ್ತಿದ್ದಾರೆ. ಆದರೆ ಒಂದಿಂಚೂ ಭೂಮಿ ಕೂಡಾ ಇವರಿಗೆ ಸಿಕ್ಕಿಲ್ಲ. 

ಪರಿಷತ್ತಿನ 'ಮರ್ಯಾದಾ ಹತ್ಯೆ'; ಮೇಲ್ಮನೆ ಘನತೆಗೆ ಕಪ್ಪುಚುಕ್ಕೆ ಇಟ್ಟ ಕುಸ್ತಿವೀರರು!

1971 ರಲ್ಲಿ ಬಿಎಸ್‌ಎಫ್‌ಗೆ ಸೇರಿ ಜಮ್ಮು  ಕಾಶ್ಮೀರ, ಗುಜರಾತ್, ಪಂಜಾಬ್, ರಾಜಸ್ಥಾನ ಸೇರಿದಂತೆ ಬೇರೆ ಬೇರೆ ಕಡೆ ಸೇವೆ ಸಲ್ಲಿಸಿ 1998 ರಲ್ಲಿ ನಿವೃತ್ತಿ ಪಡೆಯುತ್ತಾರೆ. ಮಾಜಿ ಸೈನಿಕರ ಕೋಟಾದಡಿ ಸರ್ಕಾರಿ ಜಮೀನು ಪಡೆಯಲು ಕಳೆದ 22 ವರ್ಷಗಳಿಂದ ಅಲೆಯುತ್ತಿದ್ಧಾರೆ. ಆದರೆ ಇನ್ನೂ ಕೆಲಸವಾಗಿಲ್ಲ. ಮಾಜಿ ಯೋಧನ ಗೋಳು ಕೇಳೋರೇ ಇಲ್ಲದಂತಾಗಿದೆ.