BIG 3 : ಜಮೀನು ಮಂಜೂರಾದ್ರೂ ಹಂಚಿಕೆ ಆಗಿಲ್ಲ, ಇವರ ಗೋಳು ಕೇಳೋರಿಲ್ಲ, ಅಧಿಕಾರಿಗಳೇ ಎದ್ದೇಳಿ..

ತುಮಕೂರು ಜಿಲ್ಲೆ ಕೊರಟಗೆರೆ ತಾ. ಎಸ್ ಗೊಲ್ಲಹಳ್ಳಿ ಗ್ರಾಮದ ಗ್ರಾಮಸ್ಥರು ನಿವೇಶನಕ್ಕಾಗಿ ಕಳೆದ 10 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳಿವೆ. 

First Published Mar 16, 2021, 3:01 PM IST | Last Updated Mar 16, 2021, 3:08 PM IST

ಬೆಂಗಳೂರು (ಮಾ. 16): ತುಮಕೂರು ಜಿಲ್ಲೆ ಕೊರಟಗೆರೆ ತಾ. ಎಸ್ ಗೊಲ್ಲಹಳ್ಳಿ ಗ್ರಾಮದ ಗ್ರಾಮಸ್ಥರು ನಿವೇಶನಕ್ಕಾಗಿ ಕಳೆದ 10 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳಿವೆ. ದಲಿತರೇ ಹೆಚ್ಚಿರುವ ಈ ಗ್ರಾಮದಲ್ಲಿ ಗುಡಿಸಲಿನಲ್ಲೇ ವಾಸವಾಗಿದ್ದಾರೆ. 2 ವರ್ಷದೊಳಗೆ ನಿವೇಶಕ ಹಂಚಿಕೆ ಮಾಡುವಂತೆ ಆದೇಶವನ್ನೂ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 

ಜಮೀನು ಮಂಜೂರಾದ್ರೂ ಹಂಚಿಕೆ ಆಗಿಲ್ಲ, ಸೂರಿಲ್ಲದ ಇವರ ಗೋಳು ಕೇಳೋರಿಲ್ಲದಂತಾಗಿದೆ. ಈ ಬಗ್ಗೆ ಬಿಗ್ 3 ವಿಸ್ತೃತವಾಗಿ ವರದಿ ಪ್ರಸಾರ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. 

ರಾಸಲೀಲೆ ಕೇಸ್: ಸೀಡಿ ಲೇಡಿ ಸ್ನೇಹಿತೆ ಬಾಯ್ಬಿಟ್ಟಳು ಸ್ಫೋಟಕ ಸತ್ಯ..!