BIG 3: 15 ದಿನದೊಳಗೆ 26 ಅಂಗಡಿ ಮಳಿಗೆ ಹಂಚಿಕೆ ಭರವಸೆ ನೀಡಿದ ತುಮಕೂರು ಪಾಲಿಕೆ ಅಧಿಕಾರಿಗಳು
ತುಮಕೂರು(Tumakuru) ಸ್ಮಾರ್ಟಿ ಸಿಟಿ (Smart City) ಮಾಡುವ ಉದ್ದೇಶದಿಂದ ಕೋತಿತೋಪು ರಸ್ತೆಯ ಬೀದಿ ಬದಿಯ ವ್ಯಾಪಾರಿಗಳಿಗೆ 52 ಲಕ್ಷ ರೂ ವೆಚ್ಚದಲ್ಲಿ ಮಳಿಗೆಗಳನ್ನು ಮಾಡಲಾಗಿದೆ. ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಜಡ್ಡುಗಟ್ಟಿರುವ ಕಾರಣಕ್ಕೆ 26 ಅಂಗಡಿ ಮಳಿಗೆಗಳ ಜಾಗ ಅದ್ವಾನ ಆಗಿದೆ.
ತುಮಕೂರು (ಮೇ.20): ನಗರವನ್ನು Tumakuru) ಸ್ಮಾರ್ಟಿ ಸಿಟಿ (Smart City) ಮಾಡುವ ಉದ್ದೇಶದಿಂದ ಕೋತಿತೋಪು ರಸ್ತೆಯ ಬೀದಿ ಬದಿಯ ವ್ಯಾಪಾರಿಗಳಿಗೆ 52 ಲಕ್ಷ ರೂ ವೆಚ್ಚದಲ್ಲಿ ಮಳಿಗೆಗಳನ್ನು ಮಾಡಲಾಗಿದೆ. ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಜಡ್ಡುಗಟ್ಟಿರುವ ಕಾರಣಕ್ಕೆ 26 ಅಂಗಡಿ ಮಳಿಗೆಗಳ ಜಾಗ ಅದ್ವಾನ ಆಗಿದೆ. ಬೆಂಚ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಸುಸಜ್ಜಿತ ಕಟ್ಟಡಗಳೆಲ್ಲಾ ನಿರ್ಮಾಣವಾಗಿ ಒಂದು ವರ್ಷವಾದರೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಈ ಬಗ್ಗೆ ಬಿಗ್ 3 ಫೋಕಸ್ ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದೆ. ವರದಿ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು ಮನೆ ಹಂಚಿಕೆ ಬಗ್ಗೆ ಸಭೆ ನಡೆಸಿದರು. 15 ದಿನದೊಳಗಾಗಿ ಸಮಸ್ಯೆ ಬಗೆಹರಿಸಿ, ಮಳಿಗೆ ಹಂಚಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
BIG 3: ತುಮಕೂರಿನಲ್ಲಿ 26 ಮಳಿಗೆಗಳ ಆಗ ಅದ್ವಾನ, ವರ್ಷವಾದರೂ ಫಲಾನುಭವಿಗಳಿಗೆ ಸಿಕ್ಕಿಲ್ಲ