ಬಿಗ್ 3 ಇಂಪ್ಯಾಕ್ಟ್ : ಚಿಕ್ಕಬಳ್ಳಾಪುರದ ಅಂಧರ ಕುಟುಂಬಕ್ಕೆ ಸಿಕ್ತು ನೆರವು

ಕಳೆದ 4 ತಿಂಗಳಿಂದ ಪಿಂಚಣಿ ಬರದೇ ಕುಟುಂಬವೊಂದಕ್ಕೆ ಜೀವನ ನಡೆಸುವುದು ಕಷ್ಟವಾಗಿದೆ. ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ ಎಂದು ಬಿಗ್ 3 ವರದಿ ಪ್ರಸಾರ ಮಾಡುತ್ತಿದ್ದಂತೆ ಜಿಲ್ಲಾಧಿಕಾರಿಗಳು ವರದಿಗೆ ಸ್ಪಂದಿಸದ್ದಾರೆ. 

First Published Nov 25, 2020, 4:25 PM IST | Last Updated Nov 25, 2020, 4:25 PM IST

ಬೆಂಗಳೂರು (ನ. 25): ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾ. ಚಿನ್ನಂಪಲ್ಲಿ ಗ್ರಾಮದ ಈ ಕುಟುಂಬಕ್ಕೆ ಅಂಧತ್ವವೇ ಶಾಪವಾಗಿದೆ. ಈ ಮಕ್ಕಳು ಪದವಿಯನ್ನೂ ಪೂರೈಸಿದ್ದಾರೆ. ಸರ್ಕಾರದಿಂದ ಬರುತ್ತಿದ್ದ ಪಿಂಚಣಿಯಲ್ಲಿ ಹಾಗೋ ಹೀಗೋ ಜೀವನ ನಡೆಸುತ್ತಿದ್ದರು.

ಮೂವರು ಮಕ್ಕಳು ಅಂಧರು, ಪಿಂಚಣಿ ಇಲ್ಲ, ಕೆಲಸವೂ ಇಲ್ಲ; ಅಧಿಕಾರಿಗಳೇ ಇನ್ನಾದ್ರೂ ಕಣ್ಣು ಬಿಡಿ

 ಕಳೆದ 4 ತಿಂಗಳಿಂದ ಪಿಂಚಣಿ ಬರದೇ ಜೀವನ ನಡೆಸುವುದು ಕಷ್ಟವಾಗಿದೆ. ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ ಎಂದು ಬಿಗ್ 3 ವರದಿ ಪ್ರಸಾರ ಮಾಡುತ್ತಿದ್ದಂತೆ ಜಿಲ್ಲಾಧಿಕಾರಿಗಳು ವರದಿಗೆ ಸ್ಪಂದಿಸದ್ದಾರೆ. ಕುಟುಂಬಕ್ಕೆ ನೆರವು ನೀಡಿದೆ. ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ನೀಡಲಾಗಿದೆ. ಇದು ಬಿಗ್‌ 3 ವರದಿಯ ಇಂಪ್ಯಾಕ್ಟ್..!