Asianet Suvarna News Asianet Suvarna News

ಅಧಿಕಾರಿಗಳೇ ಎದ್ದೇಳಿ, ಈ ವಿಶೇಷ ಚೇತನರಿಗೆ ಮಾಸಾಶನ ಕೊಡುವ ವ್ಯವಸ್ಥೆ ಮಾಡಿ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಂಡೂರು ಗ್ರಾಮದ ಶ್ರೀಧರ್ ಆಚಾರ್ಯ ಕುಟುಂಬದ ಇಬ್ಬರು ಮಕ್ಕಳು ಅಂಗವೈಕಲ್ಯದಿಂದ ನರಳುತ್ತಿದ್ದಾರೆ. ಎದ್ಧೇಳೋದಕ್ಕೂ ಆಗದೇ ನಾಲ್ಕು ಗೋಡೆಗಳ ಮಧ್ಯೆ ತೆವಳಿಕೊಂಡು ಬದುಕು ಸವೆಸುತ್ತಿದ್ದಾರೆ.

ಮಂಗಳೂರು (ಡಿ. 21): ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಂಡೂರು ಗ್ರಾಮದ ಶ್ರೀಧರ್ ಆಚಾರ್ಯ ಕುಟುಂಬದ ಇಬ್ಬರು ಮಕ್ಕಳು ಅಂಗವೈಕಲ್ಯದಿಂದ ನರಳುತ್ತಿದ್ದಾರೆ. ಎದ್ಧೇಳೋದಕ್ಕೂ ಆಗದೇ ನಾಲ್ಕು ಗೋಡೆಗಳ ಮಧ್ಯೆ ತೆವಳಿಕೊಂಡು ಬದುಕು ಸವೆಸುತ್ತಿದ್ದಾರೆ. ಮನೆಯಲ್ಲೂ ಬಡತನ.

ದಾವಣಗೆರೆ ಬಿಸಿಎಂ ಹಾಸ್ಟೆಲ್ ಕರ್ಮಕಾಂಡ; ಜ. 01 ರಿಂದ ಹೊಸ ಹಾಸ್ಟೆಲ್‌ಗೆ ಶಿಫ್ಟ್

ಸದ್ಯ 62 ವರ್ಷದ ತಾಯಿ ಲಲಿತಾ ಇಡೀ ಕುಟುಂಬಕ್ಕೆ ಆಸರೆಯಾಗಿದ್ದಾರೆ. ವಯಸ್ಸಾಗಿರುವುದರಿಂದ ಇವರಿಗೂ ದುಡಿಯುವ ಚೈತನ್ಯವಿಲ್ಲ. ಇಬ್ಬರು ಅಂಗವಿಕಲ ಮಕ್ಕಳಿಗೆ 1400 ರೂನಂತೆ ಮಾಸಾಶನ ಬರುತ್ತಿತ್ತು. ಆದರೆ ಕಳೆದ 2 ವರ್ಷಗಳಿಂದ ಮಾಸಾಶನ ಬರದೇ ಈ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವ ಹಾಗಾಗಿದೆ. ಅಧಿಕಾರಿಗಳೇ ದಯವಿಟ್ಟು ಎಚ್ಚೆತ್ತುಕೊಳ್ಳಿ.... ಮಾಸಾಶನ ಕೊಡುವ ವ್ಯವಸ್ಥೆ ಮಾಡಿ..

Video Top Stories