ದಾವಣಗೆರೆ ಕರಿಬೂದಿ ಸಮಸ್ಯೆ, ಮನೆಮನೆಗೆ ಭೇಟಿ ನೀಡಿ ಪರಿಹಾರ ವಾಗ್ದಾನ ನೀಡಿದ ಡಿಸಿ
ದಾವಣಗೆರೆ ಜಿಲ್ಲೆ, ಹರಿಹರ ತಾ. ಚಿಕ್ಕಬಿದರಿ ಗ್ರಾಮದಲ್ಲಿ ಇರುವ ಸಕ್ಕರೆ ಕಾರ್ಖಾನೆಯಿಂದ ಇಲ್ಲಿನ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಕಾರ್ಖಾನೆಯಿಂದ ಹೊರಬರುವ ಕರಿಬೂದಿ ಜನರ ಆರೋಗ್ಯದ ಮೇಲೆ, ಬೆಳೆಯುವ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಬೆಂಗಳೂರು (ಫೆ. 09): ದಾವಣಗೆರೆ ಜಿಲ್ಲೆ, ಹರಿಹರ ತಾ. ಚಿಕ್ಕಬಿದರಿ ಗ್ರಾಮದಲ್ಲಿ ಇರುವ ಸಕ್ಕರೆ ಕಾರ್ಖಾನೆಯಿಂದ ಇಲ್ಲಿನ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಕಾರ್ಖಾನೆಯಿಂದ ಹೊರಬರುವ ಕರಿಬೂದಿ ಜನರ ಆರೋಗ್ಯದ ಮೇಲೆ, ಬೆಳೆಯುವ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಒಂದು ಸಕ್ಕರೆ ಕಾರ್ಖಾನೆ, ಚರ್ಮರೋಗ, ಅಂಗವೈಕಲ್ಯ, ಗರ್ಭಪಾತ ತಂದೊಡ್ಡುತ್ತಿದೆ, ಏನಿದು ಸಮಸ್ಯೆ.?
ಈ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿ, ಸಂಬಂಧಪಟ್ಟ ಅಧಿಕಾರಿಗಳು, ಅಲ್ಲಿನ ಶಾಸಕರನ್ನು ಮಾತನಾಡಿಸಿ ಸಮಸ್ಯೆ ಬಗ್ಗೆ ವಿವರಿಸಲಾಯಿತು. ದಾವಣಗೆರೆ ಡಿಸಿ ಮಹಾಂತೇಶ್ ಬಿಳಗಿ ಮನೆ ಮನೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ. ಶೀಘ್ರದಲ್ಲೇ ಪರಿಹಾರ ಸೂಚಿಸುವುದಾಗಿ ಹೇಳಿದ್ಧಾರೆ.