Asianet Suvarna News Asianet Suvarna News

ದಾವಣಗೆರೆ ಬಿಸಿಎಂ ಹಾಸ್ಟೆಲ್ ಕರ್ಮಕಾಂಡ ; ಜ. 01 ರಿಂದ ಹೊಸ ಹಾಸ್ಟೆಲ್‌ಗೆ ಶಿಫ್ಟ್

ದಾವಣಗೆರೆ ಬಿಸಿಎಂ ಹಾಸ್ಟೆಲ್ ಬಗ್ಗೆ ಬಿಗ್‌ 3 ಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ವರದಿ ನೋಡಿದ ಸಚಿವ ಶ್ರೀರಾಮುಲು ಜನವರಿ 1 ರಿಂದ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡುವ ಭರವಸೆ ನೀಡಿದ್ದಾರೆ. 

First Published Dec 21, 2020, 2:38 PM IST | Last Updated Dec 21, 2020, 3:04 PM IST

ಬೆಂಗಳೂರು (ಡಿ. 21): ದಾವಣಗೆರೆ ಬಿಸಿಎಂ ಹಾಸ್ಟೆಲ್ ಬಗ್ಗೆ ಬಿಗ್‌ 3 ಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ವರದಿ ನೋಡಿದ ಸಚಿವ ಶ್ರೀರಾಮುಲು ಜನವರಿ 1 ರಿಂದ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡುವ ಭರವಸೆ ನೀಡಿದ್ದಾರೆ. 

4 ಕೋಟಿ ವೆಚ್ಚದಲ್ಲಿ 3 ಬಿಸಿಎಂ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ಸಿಗದೇ ಧೂಳು ಹಿಡಿದಿತ್ತು. ವಿದ್ಯಾರ್ಥಿಗಳನ್ನು ಬಾಡಿಗೆ ಕಟ್ಟಡದಲ್ಲಿಡಲಾಗಿತ್ತು. ಈ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿದೆ. ಕೂಡಲೇ ಸಚಿವ ಶ್ರೀರಾಮುಲು ಹೊಸ ವರ್ಷದಿಂದ ವಿದ್ಯಾರ್ಥಿಗಳನ್ನು ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡುವ ಭರವಸೆ ನೀಡಿದ್ದಾರೆ. ಇದು ಬಿಗ್ 3 ಇಂಪ್ಯಾಕ್ಟ್!

ಅಧಿಕಾರಿಗಳೇ ಎದ್ದೇಳಿ, ಈ ವಿಶೇಷ ಚೇತನರಿಗೆ ಮಾಸಾಶನ ಕೊಡುವ ವ್ಯವಸ್ಥೆ ಮಾಡಿ

Video Top Stories