Asianet Suvarna News Asianet Suvarna News

ಪತಿಗೆ ಕೊರೊನಾ, ಟೆಸ್ಟ್‌ ಮಾಡಿಸಲು ಒಲ್ಲೆ ಅಂತಿದ್ದಾಳೆ ಪತ್ನಿ; ಆರೋಗ್ಯ ಸಿಬ್ಬಂದಿಗೇ ಅವಾಜ್..!

ಪತಿಗೆ ಕೊರೊನಾ ಬಂದರೂ ಟೆಸ್ಟ್‌ ಮಾಡಿಸಿಕೊಳ್ಳಲು ಪತ್ನಿ ಒಪ್ಪುತ್ತಿಲ್ಲ. ಹಣಕ್ಕಾಗಿ ಎಲ್ಲರಿಗೂ ಪಾಸಿಟಿವ್ ಬರುವ ಹಾಗೆ ಮಾಡುತ್ತೀರಿ. ನನ್ನ ಗಂಡನಿಗೆ ಪಾಸಿಟಿವ್ ಇಲ್ಲ, ಎಂತದ್ದೂ ಇಲ್ಲ. ನನಗೆ ಏನೂ ಆಗುವುದಿಲ್ಲ. ನಾನು ಎಲ್ಲಿಗೂ ಬರುವುದಿಲ್ಲ' ಎಂದು ಆರೋಗ್ಯ ಸಿಬ್ಬಂದಿ ಮೇಲೆ ಮಹಿಳೆ ಅವಾಜ್ ಹಾಕಿದ್ದಾರೆ. 
 

ಬೆಂಗಳೂರು (ಜು. 22): ಪತಿಗೆ ಕೊರೊನಾ ಬಂದರೂ ಟೆಸ್ಟ್‌ ಮಾಡಿಸಿಕೊಳ್ಳಲು ಪತ್ನಿ ಒಪ್ಪುತ್ತಿಲ್ಲ. ಹಣಕ್ಕಾಗಿ ಎಲ್ಲರಿಗೂ ಪಾಸಿಟಿವ್ ಬರುವ ಹಾಗೆ ಮಾಡುತ್ತೀರಿ. ನನ್ನ ಗಂಡನಿಗೆ ಪಾಸಿಟಿವ್ ಇಲ್ಲ, ಎಂತದ್ದೂ ಇಲ್ಲ. ನನಗೆ ಏನೂ ಆಗುವುದಿಲ್ಲ. ನಾನು ಎಲ್ಲಿಗೂ ಬರುವುದಿಲ್ಲ' ಎಂದು ಆರೋಗ್ಯ ಸಿಬ್ಬಂದಿ ಮೇಲೆ ಮಹಿಳೆ ಅವಾಜ್ ಹಾಕಿದ್ದಾರೆ. 

ಬೀದರ್‌ನಲ್ಲಿ ರ್ಯಾಂಡಮ್ ಟೆಸ್ಟ್‌ ಮಾಡಲಾಗುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬನಿಗೆ ಪಾಸಿಟಿವ್ ಬಂದಿದೆ.  ಆ ವ್ಯಕ್ತಿಯ ಪತ್ನಿಯ ಸ್ವ್ಯಾಬ್ ಟೆಸ್ಟ್‌ ಮಾಡಲು ಅರೋಗ್ಯ ಸಿಬ್ಬಂದಿ ತೆರಳಿದಾಗ ಅವರ ಮೇಲೆ ಮಹಿಳೆ ಗರಂ ಆಗಿದ್ದಾರೆ. ಟೆಸ್ಟ್‌ಗೆ ಬರಲು ಸುತಾರಂ ಒಪ್ಪುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು ಅನ್‌ಲಾಕ್‌; ವಲಯವಾರು ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಶಾಕ್!

Video Top Stories