ಭಾರತ್ ಬಂದ್ : ಕೃಷಿ ಕಾನೂನು ವಿರುದ್ಧ ದೇಶಾದ್ಯಂತ ಹೆಚ್ಚಿದ ರೈತರ ಕಿಚ್ಚು

ಕೇಂದ್ರ ಸರ್ಕಾರ ಅಂಗೀಕರಿಸುವ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು , ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ. 

First Published Dec 8, 2020, 9:59 AM IST | Last Updated Dec 8, 2020, 9:59 AM IST

ಬೆಂಗಳೂರು (ಡಿ. 08): ಕೇಂದ್ರ ಸರ್ಕಾರ ಅಂಗೀಕರಿಸುವ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು , ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ. 

ಭಾರತ್ ಬಂದ್‌ : ಕೆಆರ್ ಮಾರುಕಟ್ಟೆಯಲ್ಲಿ ಕಂಡು ಬಂದ ದೃಶ್ಯವಿದು!

ಈ ರೈತ ಹೋರಾಟಕ್ಕೆ 18 ರಾಜಕೀಯ ಪಕ್ಷಗಳು, ದೇಶವ್ಯಾಪಿ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ವ್ಯಾಪಕ ಬೆಂಬಲ ನೀಡಿವೆ. ರಾಜ್ಯದಲ್ಲಿ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರೆಯೆ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ಬಂದ್‌ ಬಗ್ಗೆ ರೈತ ಮಹಿಳೆ ಜಯಶ್ರೀ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 'ಕೇಂದ್ರ ಸರ್ಕಾರ ಜಾರಿಗೆ ತರ ಹೊರಟಿರುವ 3  ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ರೈತರ ಪ್ರತಿಭಟನೆ 13 ನೇ ದಿನಕ್ಕೆ ಕಾಲಿಟ್ಟರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಕಾಯ್ದೆಯನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ. ಇದರ ಬಿಸಿ ಖಂಡಿತವಾಗಿ ಸರ್ಕಾರಕ್ಕೆ ತಟ್ಟುತ್ತದೆ' ಎಂದಿದ್ಧಾರೆ.