Asianet Suvarna News Asianet Suvarna News

ಕೋವಿಡ್ 19 ನಿಭಾಯಿಸುವಲ್ಲಿ ಬೆಂಗಳೂರು ನಂ 1 ಆಗಿದ್ಹೇಗೆ?

ಒಂದೂಕಾಲು ಕೋಟಿ ಜನಸಂಖ್ಯೆ ಇರುವ ಸಿಲಿಕಾನ್ ಟಿಟಿ ಬೆಂಗಳೂರಿನಲ್ಲಿ ಬರೀ 385 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 237 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. 136 ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.  ಇತರ ಮಹಾನಗರಗಳಿಗೆ ಹೋಲಿಸಿದರೆ ಕೋವಿಡ್ 19 ನಿಭಾಯಿಸುವಲ್ಲಿ ಬೆಂಗಳೂರು ನಂ 1 ಸ್ಥಾನದಲ್ಲಿದೆ. 

ಬೆಂಗಳೂರು (ಜೂ. 03): ಒಂದೂಕಾಲು ಕೋಟಿ ಜನಸಂಖ್ಯೆ ಇರುವ ಸಿಲಿಕಾನ್ ಟಿಟಿ ಬೆಂಗಳೂರಿನಲ್ಲಿ ಬರೀ 385 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 237 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. 136 ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.  

ಇತರ ಮಹಾನಗರಗಳಿಗೆ ಹೋಲಿಸಿದರೆ ಕೋವಿಡ್ 19 ನಿಭಾಯಿಸುವಲ್ಲಿ ಬೆಂಗಳೂರು ನಂ 1 ಸ್ಥಾನದಲ್ಲಿದೆ. ಚೆನ್ನೈನಲ್ಲಿ 15 ಸಾವಿರ, ದೆಹಲಿಯಲ್ಲಿ 20 ಸಾವಿರ ಹಾಗೂ ಮುಂಬೈನಲ್ಲಿ 40 ಸಾವಿರ ಕೇಸ್‌ಗಳು ದಾಖಲಾಗಿವೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಕೋವಿಡ್ 19 ನಿಭಾಯಿಸಿದ ರೀತಿ ಶ್ಲಾಘನೀಯ. 

ಕೋರೋನಾ ಕಂಟ್ರೋಲ್: ಬೆಂಗಳೂರು ಯಶಸ್ಸಿಗೆ 15 ಸೂತ್ರ..!

ಕೊರೊನಾ ಭೀಕರತೆ ಹೆಚ್ಚಾಗುವ ಮುನ್ನವೇ ಜನಸಂದಣಿಗೆ ಬ್ರೇಕ್ ಹಾಕಲಾಯಿತು. ಮಾಲ್, ಚಿತ್ರಮಂದಿರ, ಬಸ್, ಸಾರ್ವಜನಿಕ ಸಂಪರ್ಕಕ್ಕೆ ನಿರ್ಬಂಧ ಹೇರಲಾಯಿತು. ವಿದೇಶದಿಂದ ಬಂದವರ ಮೇಲೆಯೂ ತೀವ್ರ ನಿಗಾ ಇಡಲಾಯಿತು. ಇತರ ಮಹಾ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಂ 1 ಆಗಿದ್ಹೇಗೆ? ಇಲ್ಲಿದೆ ನೋಡಿ..!

Video Top Stories