Peenya Flyover: ತುಮಕೂರು ರಸ್ತೆಯಲ್ಲಿ ಸಂಚರಿಸುವವರಿಗೆ ಗುಡ್‌ ನ್ಯೂಸ್‌!

ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌ ಗಳ ನಡುವೆ ಹೊಸದಾಗಿ 240 ಕೇಬಲ್‌ ಅಳವಡಿಸಲು ಶೀಘ್ರದಲ್ಲೇ ಚಾಲನೆ ಸಿಗಲಿದ್ದು ಇನ್ನೂ ನಾಲ್ಕು ತಿಂಗಳಲ್ಲಿ ಭಾರೀ ವಾಹನ ಸಂಚಾರಕ್ಕೆ ಫ್ಲೈ ಓವರ್‌ ಮುಕ್ತವಾಗಲಿದೆ.  

First Published Apr 10, 2023, 6:14 PM IST | Last Updated Apr 10, 2023, 6:14 PM IST

ಬೆಂಗಳೂರು (ಏ.10): ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌ ಗಳ ನಡುವೆ ಹೊಸದಾಗಿ 240 ಕೇಬಲ್‌ ಅಳವಡಿಸಲು ಶೀಘ್ರದಲ್ಲೇ ಚಾಲನೆ ಸಿಗಲಿದ್ದು ಇನ್ನೂ ನಾಲ್ಕು ತಿಂಗಳಲ್ಲಿ ಭಾರೀ ವಾಹನ ಸಂಚಾರಕ್ಕೆ ಫ್ಲೈ ಓವರ್‌ ಮುಕ್ತವಾಗಲಿದೆ.  ಇನ್ನು  4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಪೀಣ್ಯ ಮೇಲ್ಸೇಸುವೆ. ಬರೋಬ್ಬರಿ ಒಂದೂವರೆ ವರ್ಷದಿಂದ ಹೆವಿ ವಾಹನ ಸಂಚಾರ ಬಂದ್ ಆಗಿತ್ತು.  ಇದೀಗ ನ್ಯಾಷನಲ್ ಹೈವೇ ಅಥಾರಿಟಿ ಅವರು ಇದೀಗ ಹೆವಿ ವಾಹನ ಓಡಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 

ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯದಲ್ಲಿ ಬರುವ ಮೇಲ್ಸೇತುವೆ ಇದಾಗಿದೆ. ದೊಡ್ಡ ಬಂಡೆ ಸೇರಿದಂತೆ ಭಾರದ ವಸ್ತುಗಳನ್ನು ಹೆಚ್ಚು ಟೈರ್‌ ಹೊಂದಿರುವ ಭಾರೀ ವಾಹನಗಳು ಸಾಗಿಸಿದ್ದರಿಂದ ಎಂಟನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103 ನೇ ಪಿಲ್ಲರ್‌ ನಡುವಿನ ಮೂರು ಕೇಬಲ್‌ ಬಾಗಿದ್ದರಿಂದ 2012 ರ ಡಿಸೆಂಬರ್‌ ಕೊನೆಯ ವಾರದಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಬಳಿಕ 16-2-2022 ರಿಂದ ಲಘು ವಾಹನಗಳಿಗೆ ಮಾತ್ರ ಮೇಲ್ಸೇತುವೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು.

Video Top Stories