Asianet Suvarna News Asianet Suvarna News

ಜೂ. 21 ರಿಂದ ಮೆಟ್ರೋ ಆರಂಭ, ಸ್ಟೇಷನ್, ಟ್ರೈನ್‌ಗಳಲ್ಲಿ ಭರದಿಂದ ಸ್ವಚ್ಛತಾ ಕಾರ್ಯ

Jun 20, 2021, 2:42 PM IST

ಬೆಂಗಳೂರು (ಜೂ. 20): ಜೂ, 21 ರಿಂದ ನಮ್ಮ ಮೆಟ್ರೋ ಸೇವೆ ಆರಂಭಗೊಳ್ಳಲಿದೆ. ಅನ್‌ಲಾಕ್ ಮಾರ್ಗಸೂಚಿಯಂತೆ ಸೋಮವಾರದಿಂದ ಶುಕ್ರವಾರದವರೆಗೆ ಮೆಟ್ರೋ ಸಂಚಾರ ಇರಲಿದೆ.

ಪ್ರಯಾಣಿಕರೇ ಗಮನಿಸಿ, ವಾರದಲ್ಲಿ 5 ದಿನ ಮೆಟ್ರೋ ಸಂಚಾರ, ಸಮಯ ಹೀಗಿರಲಿದೆ

ಬೆಳಿಗ್ಗೆ 7 ರಿಂದ 11 ರವರೆಗೆ, ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಪ್ರತಿ 5 ನಿಮಿಷಗಳ ಅಂತರದಲ್ಲಿ ಸಂಚರಿಸಲಿದೆ. ಮೆಟ್ರೋ ಸ್ಟೇಷನ್‌ಗಳಲ್ಲಿ, ಟ್ರೈನ್‌ಗಳಲ್ಲಿ ಇಂದಿನಿಂದ ಸ್ವಚ್ಛತಾ ಕಾರ್ಯ ಶುರುವಾಗಿದೆ. ಎಂಟ್ರಿಗೂ ಮುನ್ನ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ.