ಬೆಳವತ್ತ ಗ್ರಾಮದ ಹನುಂಮತು ಕೊಲೆ ಪ್ರಕರಣಕ್ಕೆ ಸ್ಪೋಟಕ ತಿರುವು ನೀಡಿದ ವೀಡಿಯೋ!
ಕೊಲೆ ಹಿಂದೆ ಕಾಂಗ್ರೆಸ್ ಶಾಸಕನ ಪರಮಾಪ್ತನ ಕೈವಾಡ ಶಂಕೆ? ನರಸಿಂಹರಾಜ ಕ್ಷೇತ್ರ ಶಾಸಕ ತನ್ವೀರ್ ಸೇಠ್ ಪರಮಾಪ್ತ ಮಂಜುನಾಥ್ @ ಬ್ಯಾಂಕ್ ಮಂಜು ಮೇಲೆ ಆರೋಪ.
ಕಳೆದ ಭಾನುವಾರ ಬೆಳವತ್ತ ಗ್ರಾಮದ ಹೊರ ವಲಯದಲ್ಲಿ ಹನುಮಂತು ಕೊಲೆ ಆಗಿತ್ತು. ಬೈಕ್‌ನಲ್ಲಿ ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.
ಇದಕ್ಕೂ ಮುನ್ನ ನವೆಂಬರ್ 5ನೇ ತಾರೀಖು ಬೆಳವತ್ತ ಗ್ರಾಮಕ್ಕೆ ಬಂದು ಬೆದರಿಕೆ ಹಾಕಿರುವ ಮಂಜುನಾಥ್ @ ಬ್ಯಾಂಕ್ ಮಂಜು. ಹನುಮಂತು ಅವರು ಜಾಗಕ್ಕೆ ಬಂದು ಯೋಗ ಎಂಬುವರ ಪರ ಧಮ್ಕಿ ಹಾಕಲು ಬಂದಿದ್ದ ತನ್ವೀರ್ ಬೆಂಬಲಿಗ. ವಿವಾದಿತ ಜಾಗವನ್ನು ಖಾಲಿ ಮಾಡುವಂತೆ ಹನುಂತುಗೆ ಬೆದರಿಕೆ.ಈ ವೇಳೆ ತಾನು ಯಾವ ಮಟಕ್ಕೆ ಬೇಕಾದ್ರು ಇಳಿಯುತ್ತೇನೆ ಎಂದಿರುವ ಮಂಜುನಾಥ್.ಉದಾಹರಣೆಯಾಗಿ ಸ್ನೇಹಮಯಿಕೃಷ್ಣ ಹೆಸರು ಹೇಳಿ ಧಮ್ಕಿ.ಸ್ಪೋಟಕ ವೀಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯ.