Asianet Suvarna News Asianet Suvarna News

BDA ಕರ್ಮಕಾಂಡ, ಕಿತ್ತೋದ ಕರೆಂಟ್ ವೈರ್‌ಗಳು, ಅಪಾಯದಲ್ಲಿ ಗುಂಜೂರು ಅಪಾರ್ಟ್‌ಮೆಂಟ್..!

ಬೆಂಗಳೂರು (Bengaluru) ನಗರದ ಹೊರವಲಯದಲ್ಲಿರುವ ಗುಂಜನೂರಿನಲ್ಲಿ (Gunjuru) ನಿರ್ಮಣವಾಗಿರುವ 7 ಅಂತಸ್ತಿನ ಅಪಾರ್ಟ್‌ಮೆಂಟ್ (Apartment)  ದುಸ್ಥಿತಿಯಲ್ಲಿದೆ. ಈ ಅಪಾರ್ಟ್‌ಮೆಂಟ್‌ ಒಳಗೆ ಹೋದರೆ ಯಾವುದನ್ನೂ ಮುಟ್ಟಿದರೆ ಎಲ್ಲಿ ಜೀವ ಹೋಗುತ್ತದೋ ಎಂಬ ಭಯದಲ್ಲಿದ್ದಾರೆ ಇಲ್ಲಿನ ಜನ. ಅದರಲ್ಲೂ ವಿದ್ಯುತ್ ಸಂಪರ್ಕ (Power Connection) ಸರಿಯಾಗಿಲ್ಲ, ಯಾವ ವೈರ್ ಮುಟ್ಟಿದರೆ ಎಲ್ಲಿ ಕರೆಂಟ್ ಹೊಡೆಯುತ್ತೋ ಎಂಬ ಆತಂಕವಿದೆ. 

ಬೆಂಗಳೂರು (ಏ. 30): ನಗರದ ಹೊರವಲಯದಲ್ಲಿರುವ ಗುಂಜನೂರಿನಲ್ಲಿ (Gunjuru) ನಿರ್ಮಣವಾಗಿರುವ 7 ಅಂತಸ್ತಿನ ಅಪಾರ್ಟ್‌ಮೆಂಟ್ (Apartment)  ದುಸ್ಥಿತಿಯಲ್ಲಿದೆ. ಈ ಅಪಾರ್ಟ್‌ಮೆಂಟ್‌ ಒಳಗೆ ಹೋದರೆ ಯಾವುದನ್ನೂ ಮುಟ್ಟಿದರೆ ಎಲ್ಲಿ ಜೀವ ಹೋಗುತ್ತದೋ ಎಂಬ ಭಯದಲ್ಲಿದ್ದಾರೆ ಇಲ್ಲಿನ ಜನ. ಅದರಲ್ಲೂ ವಿದ್ಯುತ್ ಸಂಪರ್ಕ (Power Connection) ಸರಿಯಾಗಿಲ್ಲ, ಯಾವ ವೈರ್ ಮುಟ್ಟಿದರೆ ಎಲ್ಲಿ ಕರೆಂಟ್ ಹೊಡೆಯುತ್ತೋ ಎಂಬ ಆತಂಕವಿದೆ. 

Big 3 Impact:ಚನ್ನಪಟ್ಟಣ ಹೊಂಗನೂರು ಕೆರೆ ಏರಿಯಲ್ಲಿ ಕಾಮಗಾರಿ ಶುರು

ಮೀಟರ್ ಬೋರ್ಡ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಕರಕಲಾಗಿವೆ. ಮನೆಯೊಳಗೆ ಆಗಾಗ ಸ್ಪಾರ್ಕಿಂಗ್ ಆಗುತ್ತದೆ,  ಇರಲು ಭಯವಾಗುತ್ತದೆ ಎನ್ನುತ್ತಾರೆ ನಿವಾಸಿಗಳು.  ಇವು 2012-13 ರಲ್ಲಿ ಬಿಡಿಎ ನಿರ್ಮಾಣ ಮಾಡಿರುವ ಫ್ಲಾಟ್‌ಗಳು. ಬಿಡಿಎ ಸರಿಯಾದ ಕಾಮಗಾರಿ ಮುಗಿಸದೇ ಹಸ್ತಾಂತರ ಮಾಡಿದೆ. ಈ ಫ್ಲಾಟ್‌ನಲ್ಲಿ 120 ಕುಟುಂಬಗಳು ಮಾತ್ರ ವಾಸ ಮಾಡುತ್ತಿದ್ದಾರೆ. ಉಳಿದವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಯಾರಿಗಾದರೆ ಸಮಸ್ಯೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಾರೆ. ಈ ಸಮಸ್ಯೆಯನ್ನು ಬೆಸ್ಕಾಂ, ಬಿಡಿಎ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿನ ನಿವಾಸಿಗಳು ಸಮರ್ಪಕ ವಿದ್ಯುತ್ ಸಂಪರ್ಕ ಕೊಡುವವರೆಗೆ ಬಿಗ್ 3 ಬಿಡಲ್ಲ..! 

Video Top Stories