Asianet Suvarna News Asianet Suvarna News

ರೈತರ ಜೊತೆ 1 ದಿನ' ಇಂದಿನಿಂದ ಆರಂಭ; ಕೃಷಿಯಲ್ಲಿ ಬರಲಿದೆ ಹೊಸತನ

ರೈತರನ್ನು ಭೇಟಿಯಾಗಿ ಅವರೊಂದಿಗೆ ಇಡೀ ದಿನ ಕಳೆದು, ಅವರ ಕಷ್ಟಸುಖಗಳನ್ನು ಆಲಿಸುವ, ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ರಮ 'ರೈತರ ಜೊತೆ ಒಂದು ದಿನ' ಇಂದಿನಿಂದ ಆರಂಭವಾಗಿದೆ. 
 

ಬೆಂಗಳೂರು (ನ. 14): ರೈತರನ್ನು ಭೇಟಿಯಾಗಿ ಅವರೊಂದಿಗೆ ಇಡೀ ದಿನ ಕಳೆದು, ಅವರ ಕಷ್ಟಸುಖಗಳನ್ನು ಆಲಿಸುವ, ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ರಮ 'ರೈತರ ಜೊತೆ ಒಂದು ದಿನ' ಇಂದಿನಿಂದ ಆರಂಭವಾಗಿದೆ. 

ಕೃಷಿ ಸಚಿವ ಬಿಸಿ ಪಾಟೀಲ್ ಇಂದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರನ್ನು ಸ್ವಾಗತಿಸಲು ಊರಿಗೆ ಊರೇ ಸಡಗರದಿಂದ ಕಾಯುತ್ತಿದೆ. 

ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸುವುದು, ಹೊಸತನ ತರುವುದು, ರೈತರೇ ನೇರವಾಗಿ ಮಾರ್ಕೆಟಿಂಗ್ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಈ ಕಾರ್ಯಕ್ರಮದ ಬಗ್ಗೆ ಕೃಷಿ ಸಚಿವ ಬಿಸಿ ಪಾಟೀಲ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.