Asianet Suvarna News Asianet Suvarna News

ಚಾಮರಾಜಪೇಟೆ ಈದ್ಗಾ ವಿವಾದದ ಕುರಿತು ಬಿಬಿಎಂಪಿ ಯು-ಟರ್ನ್!

ಚಾಮರಾಜಪೇಟೆ ಈದ್ಗಾ ವಿವಾದಕ್ಕೆ ಸಂಬಂಧಸಿದಂತೆ ಬಿಬಿಎಂ ಪಿ ಇದೀಗ ಯೂ ಟರ್ನ್ ಹೊಡೆದಿದೆ. ಈದ್ಗಾ ನಮಗೆ ಸೇರಿದ್ದಲ್ಲ ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.
 

ಬೆಂಗಳೂರು (ಜೂನ್ 22): ಚಾಮರಾಜಪೇಟೆಯ (Chamarajapete) ಈದ್ಗಾ ಮೈದಾನದ (Edga Ground) ಕುರಿತಾಗಿ ಬಿಬಿಎಂಪಿ ಯೂ ಟರ್ನ್ ಹೊಡೆದಿದೆ. ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿದ ಆಸ್ತಿಯಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಬಿಬಿಎಂಪಿಯ ಜಂಟಿ ಆಯುಕ್ತ, ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿದ್ದು ಎಂದು ಹೇಳಿದ್ದರು. ಆದರೆ, ವಕ್ಫ್ ಬೋರ್ಡ್ ಈ ಜಾಗ ತಮಗೆ ಸೇರಿದ್ದು ಎಂದು ಹೇಳಿ ದಾಖಲೆಯನ್ನು ಬಿಬಿಎಂಪಿಗೆ ಸಲ್ಲಿಸಿತ್ತು. ಬಿಬಿಎಂಪಿ ಕಾನೂನು ವಿಭಾಗ ಈ ದಾಖಲೆಯನ್ನು ಪರಿಶೀಲನೆ ಮಾಡುವ ವೇಳೆಯಲ್ಲಿಯೇ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಇದು ನಮ್ಮ ಆಸ್ತಿಯಲ್ಲ, ವಕ್ಫ್ ಬೋರ್ಡ್ ಸೂಕ್ತ ದಾಖಲೆ ನೀಡಿದರೆ ಖಾತಾ ಮಾಡಿಕೊಡಲು ಸಿದ್ಧ ಎಂದು ಹೇಳಿದೆ. ಇಲ್ಲದೇ ಇದ್ದಲ್ಲಿ ಸರ್ಕಾರ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಬೆಂಗಳೂರು: ಈದ್ಗಾ ಮೈದಾನಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು..!

Video Top Stories