Asianet Suvarna News Asianet Suvarna News

ರಾಜ್ಯಕ್ಕೆ 5 ದಿನ, ಬೆಂಗಳೂರಿಗೆ ಮಾತ್ರ 3 ದಿನ ಗಣೇಶೋತ್ಸವಕ್ಕೆ ಅವಕಾಶ, ಬಿಬಿಎಂಪಿ ಹೊಸ ರೂಲ್ಸ್.!

5 ದಿನಗಳ ಕಾಲ ಗಣೇಶೋತ್ಸವ ಆಚರಣೆ ಮಾಡಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ ಬಿಬಿಎಂಪಿ 3 ದಿನಗಳ ಕಾಲ ಮಾತ್ರ ಗಣೇಶನನ್ನು ಕೂರಿಸಲು ಅನುಮತಿ ನೀಡಿದೆ. 

ಬೆಂಗಳೂರು (ಸೆ. 07): 5 ದಿನಗಳ ಕಾಲ ಗಣೇಶೋತ್ಸವ ಆಚರಣೆ ಮಾಡಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ ಬಿಬಿಎಂಪಿ 3 ದಿನಗಳ ಕಾಲ ಮಾತ್ರ ಗಣೇಶನನ್ನು ಕೂರಿಸಲು ಅನುಮತಿ ನೀಡಿದೆ. ಸರ್ಕಾರ ಹೇಳುವುದೊಂದು, ಬಿಬಿಎಂಪಿ ಹೇಳುವುದೊಂದಾಗಿದೆ. ಇದರಿಂದ ಗೊಂದಲ ಉಂಟಾಗಿದೆ. 

ಬಿಎಸ್‌ವೈ ಸಾಧನೆ, ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ: ಅರುಣ್ ಸಿಂಗ್

'ವಾರ್ಡ್‌ಗೆ ಒಂದು ಗಣಪತಿ ಎಂದು ಸರ್ಕಾರ ಮಾರ್ಗಸೂಚಿಯನ್ನು ಬದಲಾವಣೆ ಮಾಡಬೇಕೆಂದು ಬೆಂಗಳೂರು ಮಹಾನಗರ ಪಾಲಿಕೆ ಗಣೇಶೋತ್ಸವ ಸಮತಿ ಸರ್ಕಾರಕ್ಕೆ ಮನವಿ ಮಾಡಿದೆ. ಇನ್ನು ಬಿಬಿಎಂಪಿ 3 ದಿನಗಳ ಕಾಲ ಮಾತ್ರ ಗಣೇಶೋತ್ಸವಕ್ಕೆ ಅವಕಾಶ ಕೊಟ್ಟಿರುವುದು ಸರಿಯಲ್ಲ. ಕೋವಿಡ್ 19 ನಿಯಮಗಳೊಂದಿಗೆ ಸರಳವಾಗಿ ಆಚರಿಸಲು ಅನುಮತಿ ಮಾಡಿಕೊಡಬೇಕು' ಎಂದು ಬೆಂಗಳೂರು ಗಣೇಶೋತ್ಸವ ಸಮಿತಿಯ ಪ್ರಕಾಶ್ ರಾಜ್ ಹೇಳಿದ್ಧಾರೆ. 

Video Top Stories