Asianet Suvarna News Asianet Suvarna News

Night Curfew: ಬೆಂಗಳೂರಿಗೆ ಬಿಗ್ ರಿಲೀಫ್.? ಸುಳಿವು ಕೊಟ್ಟ ಕಮಿಷನರ್

ಕಳೆದ 3 ದಿನಗಳಿಂದ ಸೋಂಕು ಇಳಿಕೆಯಾಗಿದೆ. ನೈಟ್ ಕರ್ಫ್ಯೂ (Night Curfew) ಹಿಂಪಡೆಯುವ ಸೂಚನೆ ನೀಡಿದ್ದಾರೆ ಬಿಬಿಎಂಪಿ ಕಮಿಷನರ್. 

ಬೆಂಗಳೂರು (ಜ. 18): ಕಳೆದ 3 ದಿನಗಳಿಂದ ಸೋಂಕು ಇಳಿಕೆಯಾಗಿದೆ. ನೈಟ್ ಕರ್ಫ್ಯೂ ಹಿಂಪಡೆಯುವ ಸೂಚನೆ ನೀಡಿದ್ದಾರೆ ಬಿಬಿಎಂಪಿ ಕಮಿಷನರ್. 

'ನಮ್ಮಲ್ಲಿ ಔಷಧಿಗಳ ಕೊರತೆಯಿಲ್ಲ, ಸೋಂಕಿತರ ಸ್ಥಿತಿ ಗಂಭೀರವಾಗಿಲ್ಲ. ಹಾಗಾಗಿ ಆತಂಕಪಡುವ ಅಗತ್ಯವಿಲ್ಲ. ಈಗಿರುವ ನಿರ್ಬಂಧಗಳನ್ನು 1 ವಾರದವರೆಗೆ ಮುಂದುವರೆಸಿದರೆ ಸಾಕಾಗಬಹುದು ಎಂಬ ನಿರೀಕ್ಷೆ ಇದೆ' ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. 

Covid 19: ಇನ್ನೂ 1 ವಾರ ನಿರ್ಣಾಯಕ ದಿನಗಳು, ಬಳಿಕ ಕರ್ಫ್ಯೂ ಬದಲಾವಣೆ: ಆರೋಗ್ಯ ಇಲಾಖೆ

ಕೊರೋನಾ ನಿರ್ಬಂಧಗಳ ಕುರಿತು ತೀರ್ಮಾನ ತೆಗೆದುಕೊಳ್ಳಲುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Bommai) ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.  ‘ಕಾದು ನೋಡುವ ತಂತ್ರ’ ಅನುಸರಿಸಲು ಸರ್ಕಾರ ನಿರ್ಧರಿಸಿದೆ.  ಶುಕ್ರವಾರ (ಜ. 21) ದಂದು ಮತ್ತೊಂದು ಸಭೆ ನಡೆಸಿ ವಾರಾಂತ್ಯ ಕರ್ಫ್ಯೂ ಕೈಬಿಡಬೇಕೆ ಅಥವಾ ಮುಂದುವರೆಸಬೇಕೆ ಎಂಬುದನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಈಗಿನ ನಿರ್ಬಂಧಗಳೇ ಮುಂದುವರೆಯಲಿವೆ.

Video Top Stories