Asianet Suvarna News Asianet Suvarna News

BBMP ಸಹಾಯಕ ಆಯುಕ್ತರಿಗೆ ಕೊರೋನಾ: ನಿನ್ನೆ ಫಾಸಿಟಿವ್, ಇಂದು ನೆಗೆಟಿವ್..!

ಬಿಬಿಎಂಪಿ ಸಹಾಯಕ ಆಯುಕ್ತರು ಕಾರ್ಪೊರೇಟರ್‌ ಇಮ್ರಾನ್ ಪಾಷಾ ಅವರೊಂದಿಗೆ ಸಂಪರ್ಕದಲ್ಲಿದ್ದರು. ಈಗಾಗಲೇ ಕೊರೋನಾದಿಂದಾಗಿ ಇಮ್ರಾನ್ ಪಾಷಾ ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ಸಹಾತಕ ಆಯುಕ್ತರಿಗೆ ಕೊರೋನಾ ಇದೆ ಎಂದು ವರದಿ ಬಂದ ಬಳಿಕ ಅವರನ್ನು ಐಸೋಲೇಷನ್ ವಾರ್ಡ್‌ಗೂ ಶಿಫ್ಟ್ ಮಾಡಲಾಗಿತ್ತು.

ಬೆಂಗಳೂರು(ಜೂ.02): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತರ ಕೊರೋನಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದ್ದು, ಸೋಮವಾರ(ಜೂ.01)ರ ವರದಿಯಲ್ಲಿ ಫಾಸಿಟಿವ್ ಬಂದಿತ್ತು. ಆದರೆ ಇಂದು ನಡೆಸಿದ ಕೊರೋನಾ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿದೆ.

ಬಿಬಿಎಂಪಿ ಸಹಾಯಕ ಆಯುಕ್ತರು ಕಾರ್ಪೊರೇಟರ್‌ ಇಮ್ರಾನ್ ಪಾಷಾ ಅವರೊಂದಿಗೆ ಸಂಪರ್ಕದಲ್ಲಿದ್ದರು. ಈಗಾಗಲೇ ಕೊರೋನಾದಿಂದಾಗಿ ಇಮ್ರಾನ್ ಪಾಷಾ ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ಸಹಾತಕ ಆಯುಕ್ತರಿಗೆ ಕೊರೋನಾ ಇದೆ ಎಂದು ವರದಿ ಬಂದ ಬಳಿಕ ಅವರನ್ನು ಐಸೋಲೇಷನ್ ವಾರ್ಡ್‌ಗೂ ಶಿಫ್ಟ್ ಮಾಡಲಾಗಿತ್ತು.

ಹೋಟೆಲ್ ಆಹಾರವನ್ನು ಎಂಜಲು ಮಾಡಿದ ಮಾಲೀಕನ ಮಗ..!

ಆದರೆ ಈಗ ನೆಗೆಟಿವ್ ಬಂದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಲ್ಯಾಬ್‌ನಲ್ಲಿ ಸರಿಯಾಗಿ ಪರೀಕ್ಷೆ ನಡೆಯುತ್ತಿದೆಯೇ ಎನ್ನುವ ಸಂಶಯ ಆರಂಭವಾಗಿದೆ. ನೆಗೆಟಿವ್ ಬಂದಿರುವುದು ಸಮಾಧಾನಕರ ಸಂಗತಿಯಾದರೂ ಕೂಡಾ ಲ್ಯಾಬ್ ವಿಶ್ವಾಸಾರ್ಹತೆ ಮೇಲೆ ಪ್ರಶ್ನೆಗಳೇಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories