ಮುರುಘಾ ಮಠದ ತಾತ್ಕಾಲಿಕ ಉತ್ತರಾಧಿಕಾರಿಯಾಗಿ ಬಸವ ಪ್ರಭು ಸ್ವಾಮೀಜಿ: ಹೆಬ್ಬಾಳ ಶ್ರೀ ಹೇಳಿದ್ದೇನು?

ಮುರುಘಾ ಶ್ರೀಗಳ ಉತ್ತರಾಧಿಕಾರಿಯಾಗಿ ಬಸವ ಪ್ರಭು ಸ್ವಾಮೀಜಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಈ ಕುರಿತು ಹೆಬ್ಬಾಳ ಮಹಾಂತರುದ್ರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಅಸಮಾಧಾನವಿಲ್ಲ ಎಂದು ತಿಳಿಸಿದ್ದಾರೆ.
 

First Published Oct 17, 2022, 11:24 AM IST | Last Updated Oct 17, 2022, 11:24 AM IST

ಮುರುಘಾ ಮಠದ ಪೂಜಾ ಕೈಂಕರ್ಯಕ್ಕೆ ಅಡ್ಡಿಯಾಗಬಾರದೆಂದು ಬಸವ ಪ್ರಭು ಸ್ವಾಮೀಜಿಯನ್ನು  ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಈ ಕುರಿತು ಹೆಬ್ಬಾಳ ಮಹಾಂತರುದ್ರ ಸ್ವಾಮೀಜಿ ಮಾತನಾಡಿದ್ದು, ವಿರಕ್ತ ಮಠದ ಎಲ್ಲಾ ಶ್ರೀಗಳಲ್ಲಿ ಬಸವ ಪ್ರಭುಶ್ರೀಗೆ ಅದೃಷ್ಟವಿದೆ. ಅನ್ನದ ಋಣ, ಅಧಿಕಾರದ ಋಣ ಇರುವವರು ಅದನ್ನು ಅನುಭವಿಸಬೇಕು. ನನ್ನ ಋಣ ಮುಗಿತು ಹಾಗಾಗಿ ನಾನು ಮಠಕ್ಕೆ ವಾಪಸ್ ಬಂದೆ ಎಂದು ಅವರು ತಿಳಿಸಿದ್ದಾರೆ. ಮುರುಘಾ ಶರಣರು ಅಪರಾಧಿಯಲ್ಲ, ಅವರು ಆರೋಪಿ ಮಾತ್ರ. ಅವರು ನಿರಪರಾಧಿಯಾಗಿ ಹೊರಗೆ ಬರುವ ಸಾಧ್ಯತೆಯಿದೆ. ಈ ಬಗ್ಗೆ ನನಗೆ ಯಾವುದೇ ನಿರಾಸೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಮೂರು ರಾಜ್ಯಗಳ ಕೇಂದ್ರ ಸ್ಥಾನ: ಗೋವಾ ಸಿಎಂ ಸಾವಂತ