Asianet Suvarna News Asianet Suvarna News

ನನ್ನ ಹೋರಾಟಕ್ಕೆ ವಿಶ್ವಗುರು ಬಸವೇಶ್ವರರು ಸ್ಪೂರ್ತಿ: ಬಿಎಸ್‌ವೈ

ನಾವು ಯಾವುದೇ ವ್ಯಕ್ತಿಗೆ ಮಾತೊಂದನ್ನು ಕೊಟ್ಟರೆ ಎಂಥ ಕಷ್ಟಕರ ಪರಿಸ್ಥಿತಿಯಲ್ಲಿಯೂ ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು. ಒಂದು ವೇಳೆ ನಾವು ಕೊಟ್ಟಮಾತಿನಂತೆ ನಡೆದುಕೊಳ್ಳದೇ ಹೋದರೆ, ನಾವು ಪೂಜಿಸುವ ಆರಾಧಿಸುವ ಲಿಂಗವೇ ಘಟ ಸರ್ಪವಾಗುವುದು. ಈ ವಚನದ ಸಾರಸರ್ವಸ್ವವನ್ನು ನಾನು ನನ್ನ ಬದುಕಿನಲ್ಲಿ ಕಾಯಾ-ವಾಚಾ-ಮನಸಾ ಅನುಸರಿಸಿಕೊಂಡು ಬಂದಿದ್ದೇನೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. 

ಬೆಂಗಳೂರು (ಏ. 26): ಹನ್ನೆರಡನೆಯ ಶತಮಾನದ ಮಹಾನ್‌ ಸಮಾಜ ಸುಧಾರಕ ಬಸವಣ್ಣನವರ ಈ ವಚನ ಪ್ರತ್ಯಕ್ಷವಾಗಿಯೋ ಇಲ್ಲ ಪರೋಕ್ಷವಾಗಿಯೋ ನನ್ನ ಮೇಲೆ ಗಾಢ ಪರಿಣಾಮವನ್ನು ಬೀರಿತು. ಈ ವಚನದ ಒಟ್ಟು ಸಾರ ನುಡಿದಂತೆ ನಡೆದುಕೊಳ್ಳಬೇಕು. ನಾವು ಯಾವುದೇ ವ್ಯಕ್ತಿಗೆ ಮಾತೊಂದನ್ನು ಕೊಟ್ಟರೆ ಎಂಥ ಕಷ್ಟಕರ ಪರಿಸ್ಥಿತಿಯಲ್ಲಿಯೂ ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು.

ಬಿಎಸ್‌ವೈ ಕನ್ನಡಪ್ರಭಕ್ಕೆ ಬರೆದ ವಿಶೇಷ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ: ಶರಣರ ಚಿಂತನೆಗಳು ಆಡಳಿತ ಪ್ರಕ್ರಿಯೆಗೆ ದಾರಿದೀಪ!

ಒಂದು ವೇಳೆ ನಾವು ಕೊಟ್ಟಮಾತಿನಂತೆ ನಡೆದುಕೊಳ್ಳದೇ ಹೋದರೆ, ನಾವು ಪೂಜಿಸುವ ಆರಾಧಿಸುವ ಲಿಂಗವೇ ಘಟ ಸರ್ಪವಾಗುವುದು. ಈ ವಚನದ ಸಾರಸರ್ವಸ್ವವನ್ನು ನಾನು ನನ್ನ ಬದುಕಿನಲ್ಲಿ ಕಾಯಾ-ವಾಚಾ-ಮನಸಾ ಅನುಸರಿಸಿಕೊಂಡು ಬಂದಿದ್ದೇನೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.