#BoycottChina: ಬಳ್ಳಾರಿಯ ಜೀನ್ಸ್ ಉದ್ಯಮಿಗಳಿಂದ ಚೀನಾ ಕಚ್ಚಾ ವಸ್ತುಗಳಿಗೆ ಬಹಿಷ್ಕಾರ

ಗಡಿಭಾಗದಲ್ಲಿ ಪದೇ ಪದೇ ತಂಟೆ ತೆಗೆದು ಇಡೀ ದೇಶದ ನೆಮ್ಮದಿ ಹಾಳು ಮಾಡುವ ಚೀನಾ ಗೆ ಪಾಠ ಕಲಿಸಲೇಬೇಕು. ಸೈನಿಕರು ಗಡಿಯಲ್ಲಿ ಹೋರಾಡಿದರೆ ನಾವು ಚೀನಾ ವಸ್ತು ಬೈಕಾಟ್ ಮಾಡಿ ಆರ್ಥಿಕ ಹೊಡೆತಕ್ಕೆ ನಾಂದಿ ಹಾಡುತ್ತೇವೆ. ಇನ್ಮುಂದೆ ನಮಗೆ ಬೇಕಾದ ಕಚ್ಚಾ ವಸ್ತುಗಳನ್ನ ಕೊರಿಯಾ, ತೈವಾನ್, ಹಾಂಕಾಗ್ ನಿಂದ ಪಡೆಯುತ್ತೇವೆ ಎಂದು ಬಳ್ಳಾರಿ ಜೀನ್ಸ್ ಉದ್ಯಮಿಗಳೂ #BoycottChina ಅಭಿಯಾನ ಶುರು ಮಾಡಿದ್ದಾರೆ. 

First Published Jun 22, 2020, 5:39 PM IST | Last Updated Jun 22, 2020, 5:39 PM IST

ಬೆಂಗಳೂರು (ಜೂ. 22): ಗಡಿಭಾಗದಲ್ಲಿ ಪದೇ ಪದೇ ತಂಟೆ ತೆಗೆದು ಇಡೀ ದೇಶದ ನೆಮ್ಮದಿ ಹಾಳು ಮಾಡುವ ಚೀನಾ ಗೆ ಪಾಠ ಕಲಿಸಲೇಬೇಕು. ಸೈನಿಕರು ಗಡಿಯಲ್ಲಿ ಹೋರಾಡಿದರೆ ನಾವು ಚೀನಾ ವಸ್ತು ಬೈಕಾಟ್ ಮಾಡಿ ಆರ್ಥಿಕ ಹೊಡೆತಕ್ಕೆ ನಾಂದಿ ಹಾಡುತ್ತೇವೆ. ಇನ್ಮುಂದೆ ನಮಗೆ ಬೇಕಾದ ಕಚ್ಚಾ ವಸ್ತುಗಳನ್ನ ಕೊರಿಯಾ, ತೈವಾನ್, ಹಾಂಕಾಗ್ ನಿಂದ ಪಡೆಯುತ್ತೇವೆ ಎಂದು ಬಳ್ಳಾರಿ ಜೀನ್ಸ್ ಉದ್ಯಮಿಗಳೂ #BoycottChina ಅಭಿಯಾನ ಶುರು ಮಾಡಿದ್ದಾರೆ. 

ಶಾಂತಿಗೂ ಬದ್ಧ, ಸಮರಕ್ಕೂ ಬದ್ಧ: ಚೀನಾಗೆ ತಕ್ಕ ಪಾಠ ಕಲಿಸಲು ಮೋದಿ ರೆಡಿ..!

ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ಚೀನಾದಿಂದ ಸಾಕಷ್ಟು ಕಚ್ಚಾ ವಸ್ತುಳು ಆಮದು ಆಗುತ್ತಿದ್ದವು. ಜೀನ್ಸ್ ಉಡುಪು ತಯಾರಿಸಲು ಅವಶ್ಯ ಇರುವ ಜಿಪ್, ಬಟನ್ಸ್ , ಡೈ ಸೇರಿ ವಿವಿಧ ಚೀನಾ ಕಚ್ಚಾ ವಸ್ತುಗಳಿಗೆ ಬ್ರೇಕ್ ಹಾಕಿದ್ದಾರೆ. #BoycottChina ಕ್ಕೆ ಬಳ್ಳಾರಿ ಜೀನ್ಸ್ ಕಂಪನಿ ಮಾಲಿಕರು ನಾಂದಿ ಹಾಡಿದ್ದಾರೆ.  
 

Video Top Stories