ವಿವಿಧ ಕ್ಷೇತ್ರದ ಸಾಧಕರಿಗೆ ಏಷ್ಯಾನೆಟ್ ಸುವರ್ಣನ್ಯೂಸ್-ಕನ್ನಡಪ್ರಭ ಸನ್ಮಾನ!
ಕನ್ನಡ ಮಾಧ್ಯಮ ಲೋಕದಲ್ಲಿ ತೆರೆಮರೆಯ ಸಾಧಕರನ್ನು ಹುಡುಕಿ ಗೌರವಿಸುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಕೆಲಸ ಶುರು ಮಾಡಿದ್ದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್. ಇದೀಗ ವಿಯೇಟ್ನಾಂನಲ್ಲಿ ಗಣ್ಯ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
2024ನೇ ಇಸವಿಯಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಐದನೇ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದೀಗ ವಿಯೇಂಟ್ನಾಂನಲ್ಲಿ ಆಯೋಜನೆಗೊಂಡಿದೆ. ವಿವಿಧ ಕ್ಷೇತ್ರದ ಗಣ್ಯ ಸಾಧಕರಿಗೆ ಇಂಡಿಯಾ ವಿಯೇಟ್ನಾಂ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ ನೀಡಿ ಗೌರವಿಸಲಾಗುತ್ತಿದೆ. ಬಹರೇನ್ ಇಂಡಿಯಾ ಇಂಟರ್ನ್ಯಾಷನಲ್ ಅವಾರ್ಡ್ಸ್ ಮೂಲಕ ಕನ್ನಡ ಮಾಧ್ಯಮ ಲೋಕದಲ್ಲೇ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬಹರೇನ್ನಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ನಂತರ ದುಬೈ ಹಾಗೂ ಮಲೇಷ್ಯಾದಲ್ಲೂ ಅಂತಾರಾಷ್ಟ್ರೀಯ ಕಾರ್ಯಕ್ರಮ ಸಂಘಟಿಸಲಾಗಿದೆ. ಲಂಡನ್ನಲ್ಲಿ ಇಂಡಿಯಾ - ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್ ಯಶಸ್ವಿಯಾಗಿ ಆಯೋಜಿಸಲಾಗಿದೆ.