ಬಿಜೆಪಿಗೆ ಕೋಲು ಕೊಟ್ಟು ಹೊಡೆಸ್ಕೊಂಡ್ರಾ ಮಾಜಿ ಸಿಎಂ ಸಿದ್ದರಾಮಯ್ಯ?
ರಾಜ್ಯ ರಾಜಕೀಯದಲ್ಲಿ ಮಹಾತ್ಮ ಗಾಂಧಿಯ ಕುಡುಕ ಮಗನೂ ಬಂದ. ಗಾಂಧಿ ಮಗ ಕುಡುಕ ಆಗಿರ್ಲಿಲ್ವಾ ಅಂದ್ರು ಮಾಜಿ ಸಿಎಂ ಸಿದ್ದರಾಮಯ್ಯ. ಹಳಿ ತಪ್ಪಿದ ಸಿದ್ದು ಮಾತಿಗೆ ಬಿಜೆಪಿ ಗುದ್ದು. ಸಿಎಂ ಬೊಮ್ಮಾಯಿ, ಅಪ್ಪ- ಮಗ, ವಂಶ ರಹಸ್ಯ. ಸಿದ್ದು ವಿವಾದದಲ್ಲಿ ಎದ್ದು ಬಂದಿದ್ದೇಕೆ ಪುತ್ರ ರಾಕೇಶ್ ವಿಷಯ?
ಬೆಂಗಳೂರು(ಜು.30): ರಾಜ್ಯ ರಾಜಕೀಯದಲ್ಲಿ ಮಹಾತ್ಮ ಗಾಂಧಿಯ ಕುಡುಕ ಮಗನೂ ಬಂದ. ಗಾಂಧಿ ಮಗ ಕುಡುಕ ಆಗಿರ್ಲಿಲ್ವಾ ಅಂದ್ರು ಮಾಜಿ ಸಿಎಂ ಸಿದ್ದರಾಮಯ್ಯ. ಹಳಿ ತಪ್ಪಿದ ಸಿದ್ದು ಮಾತಿಗೆ ಬಿಜೆಪಿ ಗುದ್ದು. ಸಿಎಂ ಬೊಮ್ಮಾಯಿ, ಅಪ್ಪ- ಮಗ, ವಂಶ ರಹಸ್ಯ. ಸಿದ್ದು ವಿವಾದದಲ್ಲಿ ಎದ್ದು ಬಂದಿದ್ದೇಕೆ ಪುತ್ರ ರಾಕೇಶ್ ವಿಷಯ?
ಹೌದು ಮಾಜಿ ಸಿಎಂ ಸಿದ್ದರಾಮಯ್ಯ ಅಂದ್ರೆ ಮಾತಿನ ಮಲ್ಲ, ಅವರ ಮಾತು ಕೇಳೋದೇ ಚಂದ. ಮಾತಿನ ಮಂಟಪ ಕಟ್ಟಿ ಎದುರಾಳಿಗಳನ್ನು ಮಾತಿನಲ್ಲೇ ಮಕಾಡೆ ಮಲಗಿಸಿ ಬಿಡೋದ್ರಲ್ಲಿ ಸಿದ್ದರಾಮಯ್ಯ ಅವರದ್ದು ಎತ್ತಿದ ಕೈ. ಅಂತಹ ಸಿದ್ದರಾಮಯ್ಯ ತಮ್ಮ ಮಾತಿನಿಂದಲೇ ಕೆಲವೊಮ್ಮೆ ಪೇಚಿಗೆ ಸಿಲುಕೋದು ಇದೆ. ಸದ್ಯ ಅದೇ ಆಗಿದೆ. ಬೊಮ್ಮಾಯಿ ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಎಡವಟ್ಟೊಂದನ್ನು ಮಾಡಿದ್ದಾರೆ. ಆದರೀಗ ಅದೇ ಅವರಿಗೆ ತಿರುಗುಬಾಣವಾಗಿದೆ. ಅಷ್ಟಕ್ಕೂ ಅವರೇನು ಹೇಳಿದ್ದು? ಇಲ್ಲಿದೆ ವಿವರ