Asianet Suvarna News Asianet Suvarna News

ಒಂದೇ ಸೂರಿನಡಿ ವೈವಿಧ್ಯಮಯ ವಿನ್ಯಾಸ: ಗ್ರಾಹಕರ ಮನಸೂರೆಗೊಂಡ Furniture Expo

ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಹಯೋಗದಲ್ಲಿ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಇಂಡಿಯಾ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಪೋ ಆಯೋಜಿಸಲಾಗಿದೆ. ಇಂದು 2 ನೇ ದಿನಕ್ಕೆ ಕಾಲಿಟ್ಟಿದೆ. 

First Published Nov 13, 2021, 12:43 PM IST | Last Updated Nov 13, 2021, 12:49 PM IST

ಬೆಂಗಳೂರು (ನ. 13): ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಹಯೋಗದಲ್ಲಿ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಇಂಡಿಯಾ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೋರ್‌ (Furniture Expo)  ಎಕ್ಸ್‌ಪೋ ಆಯೋಜಿಸಲಾಗಿದೆ. ಇಂದು 2 ನೇ ದಿನಕ್ಕೆ ಕಾಲಿಟ್ಟಿದೆ. 

ನ. 17 ರಿಂದ 3 ದಿನ Bengaluru Tech Summit, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟನೆ

ಮನೆ ಮತ್ತು ಕಚೇರಿಗೆ ಒಪ್ಪುವ ವೈವಿಧ್ಯಮಯ ವಿನ್ಯಾಸದ ಉತ್ಪನ್ನಗಳು ಒಂದೇ ಸೂರಿನಡಿ ವೀಕ್ಷಿಸಲು ಹಾಗೂ ಖರೀದಿಸಲು ಎಕ್ಸ್‌ಪೋದಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಳಾಂಗಣ ವಿನ್ಯಾಸದ ವಸ್ತುಗಳು, ವೈವಿಧ್ಯಮಯ ವಿದ್ಯುತ್‌ ದೀಪಗಳು, ಆರಾಮದಾಯಕ ಸೋಫಾಸೆಟ್‌ಗಳು, ನೆಲಹಾಸು, ಹಾಸಿಗೆ, ಟಿವಿ ಸ್ಟ್ಯಾಂಡ್‌, ನೆಲಹಾಸು, ಕರಕುಶಲ ವಸ್ತು, ತಲೆದಿಂಬು, ಪೈಂಟಿಂಗ್ಸ್‌, ಮಸಾಜ್‌ ಚೇರ್‌, ಡೈನಿಂಗ್‌ ಟೇಬಲ್‌, ಗೋಡೆ ಗಡಿಯಾರ, ಸೆಂಟರ್‌ ಟೇಬಲ್‌, ಸೈಡ್‌ ಟೇಬಲ್‌, ಶೂ ರಾಕ್‌, ಫಿಟ್ನೆಸ್‌ ಸಾಧನ, ಲೆದರ್‌ ಫರ್ನಿಚರ್‌, ವಾಲ್‌ಪೇಪರ್‌, ಟಿವಿ ಯೂನಿಟ್‌ ಮತ್ತಿತರ ವಸ್ತುಗಳು ಸೇರಿದಂತೆ ನಿಮ್ಮ ಕನಸಿನ ಮನೆ, ಕಚೇರಿ ಅಲಂಕರಿಸಲು ಬೇಕಾಗುವ ಎಲ್ಲ ವಸ್ತುಗಳು ಈ ಎಕ್ಸ್‌ಪೋದಲ್ಲಿ ಸಿಗಲಿವೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರು, ಗ್ರಾಹಕರು ಭೇಟಿ ನೀಡಬಹುದು.