Asianet Suvarna News Asianet Suvarna News

ಕವರ್ ಸ್ಟೋರಿ ಇಂಪ್ಯಾಕ್ಟ್: ಸ್ವಾಬ್ ಟೆಸ್ಟ್ ಪಡೆಯದೇ ವರದಿ ನೀಡಿ ಹಣ ಪಡೆಯುತ್ತಿದ್ದವರು ವಜಾ!

ಸ್ವ್ಯಾಬ್ ಟೆಸ್ಟ್‌ ಪಡೆಯದೇ, ವರದಿ ನೀಡಿ ಹಣ ಮಾಡುತ್ತಿದ್ದ ಶ್ರೀರಾಮ್‌ಪುರ, ಮಲ್ಲತ್‌ಹಳ್ಳಿ ಹಾಗೂ ಯಶವಂತಪುರ ಆರೋಗ್ಯ ಕೇಂದ್ರದ ಮೂವರನ್ನು ಬಿಬಿಎಂಪಿ ವಜಾಗೊಳಿಸಿದೆ. 

ಬೆಂಗಳೂರು (ಏ. 23): ಸ್ವ್ಯಾಬ್ ಟೆಸ್ಟ್‌ ಪಡೆಯದೇ, ವರದಿ ನೀಡಿ ಹಣ ಮಾಡುತ್ತಿದ್ದ ಶ್ರೀರಾಮ್‌ಪುರ, ಮಲ್ಲತ್‌ಹಳ್ಳಿ ಹಾಗೂ ಯಶವಂತಪುರ ಆರೋಗ್ಯ ಕೇಂದ್ರದ ಮೂವರನ್ನು ಬಿಬಿಎಂಪಿ ವಜಾಗೊಳಿಸಿದೆ. 

'ಕೊರೊನಾ ರಿಪೋರ್ಟ್ ಮಾರಾಟಕ್ಕಿದೆ' ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವಿವರವಾಗಿ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತ ಬಿಬಿಎಂಪಿ, ನರೇಶ್, ವೆಂಕಟೇಶ್ ಹಾಗೂ ಪವನ್‌ರನ್ನು ಕೆಲಸದಿಂದ ವಜಾಗೊಳಿಸಿದೆ. ಇದು ಕವರ್ ಸ್ಟೋರಿ ಇಂಪ್ಯಾಕ್ಟ್! ಕಾಸು ಕೊಟ್ಟರೆ ಅವರಿಗೆ ಬೇಕಾದ ರೀತಿಯಲ್ಲಿ ಇವರು ವರದಿ ಕೊಡುತ್ತಿದ್ದರು. ಇವರ ಖತರ್ನಾಕ್ ಕೆಲಸ ಕವರ್ ಸ್ಟೋರಿ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ. 

ವಾರ್ಡ್‌ನಲ್ಲೇ ಸೋಂಕಿತ ಸತ್ತು ಬಿದ್ರೂ ಕ್ಯಾರೇ ಎನ್ನದ ಸಿಬ್ಬಂದಿ, ಇದೆಂಥಾ ಬೇಜವಾಬ್ದಾರಿ..?