Asianet Suvarna News Asianet Suvarna News

8 ಹೊಸಮುಖ, 4 ಮಂದಿ ಹಿರಿಯರ ಪರ ಹೈಕಮಾಂಡ್ ಒಲವು, ಲಿಂಬಾವಳಿಗೆ ಡಿಸಿಎಂ ಪಟ್ಟ.?

Aug 3, 2021, 2:53 PM IST

ಬೆಂಗಳೂರು (ಆ. 03): ಸಚಿವ ಸಂಪುಟ ರಚನೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಅಂತಿಮ ಪಟ್ಟಿ ಹೊರ ಬೀಳಲು ಇಂದು ಸಂಜೆಯವರೆಗೆ ಕಾಯಬೇಕಾಗಿದೆ. ಸಂಪುಟ ರಚನೆಗೆ ಯಾವ ಫಾರ್ಮುಲಾ ಬಳಸುತ್ತಾರೆ ಎಂಬುದು ಚರ್ಚೆ ನಡೆಯುತ್ತಿದೆ.

ಸಂಪುಟ ಸೇರಲು ಬಿಸಿ ಪಾಟೀಲ್, ಶ್ರೀರಾಮುಲು ಸರ್ಕಸ್, ದೇವರ ಮೊರೆ ಹೋದ ನಾಯಕರು

ಅರವಿಂದ ಲಿಂಬಾವಳಿ ಡಿಸಿಎಂ ಆಗಲು ಹೈಕಮಾಂಡ್ ಹಾಗೂ ಪಕ್ಷದ ಒಪ್ಪಿಗೆ ಇದೆ. ಒಕ್ಕಲಿಗ ಕೋಟಾದಿಂದ ಯಾರಾಗಬೇಕು ಎಂಬ ಚರ್ಚೆ ಮುಂದುವರೆದಿದೆ. ಬಿಜೆಪಿ ಹೈಕಮಾಂಡ್ 12 ಜನರ ಪಟ್ಟಿ ಸಿದ್ಧಪಡಿಸಿದ್ದು, ಅದರಲ್ಲಿ 8 ಮಂದಿ ಹೊಸಮುಖ, 4 ಮಂದಿ ಹಿರಿಯರಿಗೆ ಸ್ಥಾನ ಕೊಡಲಾಗಿದೆ ಎನ್ನಲಾಗಿದೆ.