ಜಾನುವಾರುಗಳಿಗೆ ಆಂಬುಲೆನ್ಸ್ ಸೇವೆ ಆರಂಭ
ಪಶು ಸಂಗೋಪನಾ ಇಲಾಖೆ, ಪಶು ಸಂಜೀವಿನಿ ಯೋಜನೆಯಡಿ ಆಂಬುಲೆನ್ಸ್ ಸೇವೆಯನ್ನು ಜಾರಿಗೊಳಿಸಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಸೇವೆ ಆರಂಭಗೊಂಡಿದೆ.
ಬೆಂಗಳೂರು (ಫೆ. 15): ಪಶು ಸಂಗೋಪನಾ ಇಲಾಖೆ, ಪಶು ಸಂಜೀವಿನಿ ಯೋಜನೆಯಡಿ ಆಂಬುಲೆನ್ಸ್ ಸೇವೆಯನ್ನು ಜಾರಿಗೊಳಿಸಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಸೇವೆ ಆರಂಭಗೊಂಡಿದೆ. ರೈತರ ಮನೆಗೆ ಹೋಗಿ ಸೇವೆ ಸಲ್ಲಿಸಲಾಗುತ್ತದೆ. ಬೀದರ್ನಲ್ಲಿ 36 ಹಸುಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ರೈತರಿಗೆ ಇದು ನಿಜಕ್ಕೂ ಅನುಕೂಲಕರವಾಗಿದೆ.