ಲೀಡರ್ ಆಗಿ ಕೆಲಸ ಮಾಡಿದ್ದೇನೆ, ಡೀಲರ್ ಆಗಿಲ್ಲ: ಕೋಡಿಹಳ್ಳಿ ವಿರುದ್ಧ ಸುಬ್ಬಾರಾವ್ ವಾಗ್ದಾಳಿ
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿ ಕಾರಿದ ನೌಕರರ ಯೂನಿಯನ್ ಅಧ್ಯಕ್ಷ ಅನಂತ್ ಸುಬ್ಬಾರಾವ್| ಏಕಾಏಕಿ ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರನ್ನಾಗಿ ಮಾಡೋದು ಹೇಗೆ| ಕೋಡಿಹಳ್ಳಿ ಚಂದ್ರಶೇಖರ್ ರೀತಿ ಆಕಾಶದಿಂದ ಇಳಿದು ಬಂದು ಪ್ರತ್ಯಕ್ಷ ಆಗಿಲ್ಲ|
ಬೆಂಗಳೂರು(ಡಿ.13): ನಾವಿರೋದು ಜನರಿಗಾಗಿ, ಇವರೇನು ಉಪವಾಸ ಮಾಡುತ್ತಾರೆ? ನಾನು ಲೀಡರ್ ಆಗಿ ಕೆಲಸ ಮಾಡಿದ್ದೇನೆ ಹೊರತು ಡೀಲರ್ ಆಗಿ ಅಲ್ಲ ಎಂದು ಹೇಳುವ ಮೂಲಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೌಕರರ ಯೂನಿಯನ್ ಅಧ್ಯಕ್ಷ ಅನಂತ್ ಸುಬ್ಬಾರಾವ್ ಕಿಡಿ ಕಾರಿದ್ದಾರೆ.
ಜಪ್ಪಯ್ಯ ಅಂದ್ರು ಹಿಂದೆ ಸರಿಯಲ್ಲ : ಮಹಿಳಾ ನೌಕರರ ಪಟ್ಟು
ಕೋಡಿಹಳ್ಳಿ ಚಂದ್ರಶೇಖರ್ ರೀತಿ ಆಕಾಶದಿಂದ ಇಳಿದು ಬಂದು ಪ್ರತ್ಯಕ್ಷ ಆಗಿಲ್ಲ. ಏಕಾಏಕಿ ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರನ್ನಾಗಿ ಮಾಡೋದು ಹೇಗೆ ಎಂದು ಕೋಡಿಹಳ್ಳಿ ವಿರುದ್ದ ಎಂದು ಸುಬ್ಬಾರಾವ್ ಹರಿಹಾಯ್ದಿದ್ದಾರೆ.