Asianet Suvarna News Asianet Suvarna News

ಪರವಾನಗಿ ಇಲ್ಲದ ಪೆಟ್‌ಶಾಪ್‌ಗಳಿಗೆ ಬೀಗ, ನಿರ್ದಾಕ್ಷಿಣ್ಯ ಕ್ರಮಕ್ಕೆ ಪ್ರಭು ಚೌಹಾಣ್ ಸೂಚನೆ

Jul 3, 2021, 10:07 AM IST

ಬೆಂಗಳೂರು (ಜು. 03): ನೋಂದಣಿಯಾಗದ ಹಾಗೂ ಅವೈಜ್ಞಾನಿಕವಾಗಿ ನಡೆಸುತ್ತಿರುವ ಪೆಟ್ ಶಾಪ್ ಮತ್ತು ನಾಯಿ ತಳಿ ಸಂವರ್ಧನಾ ಕೇಂದ್ರಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸೂಚಿಸಿದ್ದಾರೆ.

ಡೆಲ್ಟಾ ಪ್ಲಸ್ ಶೇ. 60 ರಷ್ಟು ಹೆಚ್ಚು ಹಬ್ಬುವಿಕೆ ಸಾಮರ್ಥ್ಯ ಹೊಂದಿದೆ: ತಜ್ಞರಿಂದ ಎಚ್ಚರಿಕೆ

ರಾಜ್ಯದಲ್ಲಿ ಸಾವಿರಾರು ಪೆಟ್ ಶಾಪ್‌ಗಳು ನಿಯಮಗಳನ್ನು ಪಾಲನೆ ಮಾಡದೇ ಮಳಿಗೆಗಳನ್ನು ನಡೆಸುತ್ತಿದೆ. ಅತ್ಯಂತ ಇಕ್ಕಟ್ಟಾದ, ಗಾಳಿ ಬೆಳಕು ಇಲ್ಲದ ಮಳಿಗೆಯಲ್ಲಿ ಕೂಡಿ ಹಾಕಿ ವ್ಯವಹಾರ ಮಾಡುತ್ತಿರುವುದರ ಕುರಿತು ವರದಿಯಾಗಿದೆ. ಅಂತಹ ಮಳಿಗೆಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.