ಮೈಸೂರು ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನ ಕಾರ್ಯಕ್ರಮ ಯಶಸ್ವಿ
* ಮೋದಿ ನೃತೃತ್ವದಲ್ಲಿ 15000 ಮಂದಿ ಏಕಕಾಲದಲ್ಲಿ ಯೋಗಾಸನ
* 8ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ
* 45 ನಿಮಿಷಗಳ ಕಾಲ ನಡೆದ ಯೋಗಾಸನ ಕಾರ್ಯಕ್ರಮ
ಮೈಸೂರು(ಜೂ.21): ಇಂದು(ಮಂಗಳವಾರ) ಮೈಸೂರಿನ ಅರಮನೆ ಮೈದಾನ ಮುಂಭಾಗದಲ್ಲಿ ನಡೆದ 8ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ವೇಳೆ ಮಾತನಾಡಿದ ಮೋದಿ, ದೇಶದ ಜನರಿಗೆ ಯೋಗ ದಿನದ ಶುಭಾಷಯ ಕೋರಿದರು. ಮೋದಿ ನೃತೃತ್ವದಲ್ಲಿ 15000 ಮಂದಿ ಏಕಕಾಲದಲ್ಲಿ ಯೋಗಾಸನ ಮಾಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ನಡೆದ ಯೋಗಾಸನ ಕಾರ್ಯಕ್ರಮ ನಡೆದಿದೆ. ಈ ಮೂಲಕ ಮೈಸೂರಿನಲ್ಲಿ ನಡೆದ 8ನೇ ವಿಶ್ವ ಯೋಗ ದಿನಾಚರಣೆ ಯಶಸ್ವಿಯಾಗಿದೆ.