Asianet Suvarna News Asianet Suvarna News

ಕೆಪಿಸಿಸಿ ಗದ್ದುಗೆ ಏರಿದ ಡಿಕೆ ಸಾಹೇಬರು; ಇವರ ಯಶಸ್ಸಿನ ಹಿಂದೆ ಇದ್ದಾರೆ ಮೂವರು ಸ್ತ್ರೀಯರು

ದೇಶದ ಇತಿಹಾಸದಲ್ಲೇ ಅತಿ ದೊಡ್ಡ ವರ್ಚುವಲ್‌ ಕಾರ್ಯಕ್ರಮದ ಮೂಲಕ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್‌ ಅವರು ಕೆಪಿಸಿಸಿಯ 41ನೇ ಅಧ್ಯಕ್ಷರಾಗಿ ಗುರುವಾರ ಪದಗ್ರಹಣ ಮಾಡಿದರು. 

ಬೆಂಗಳೂರು (ಜು. 03): ದೇಶದ ಇತಿಹಾಸದಲ್ಲೇ ಅತಿ ದೊಡ್ಡ ವರ್ಚುವಲ್‌ ಕಾರ್ಯಕ್ರಮದ ಮೂಲಕ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್‌ ಅವರು ಕೆಪಿಸಿಸಿಯ 41ನೇ ಅಧ್ಯಕ್ಷರಾಗಿ ಗುರುವಾರ ಪದಗ್ರಹಣ ಮಾಡಿದರು. ಡಿಜಿಟಲ್‌ ಸಾಧನಗಳ ಮೂಲಕ ನಾಡಿನ ಎಲ್ಲೆಡೆಯಿಂದ ಈ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 20 ಲಕ್ಷ ಕಾಂಗ್ರೆಸ್‌ ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪವನ್ನೂ ಶಿವಕುಮಾರ್‌ ತೊಟ್ಟರು.

ಡಿಕೆಶಿ ಕಾರ್ಯಕ್ರಮದಲ್ಲಿ ಸೋಂಕು ತಡೆಗೆ ‘ಯುವಿಸಿ ತಂತ್ರಜ್ಞಾನ’

ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹಮದ್‌, ಈಶ್ವರ್‌ ಖಂಡ್ರೆ ಹಾಗೂ ಸತೀಶ್‌ ಜಾರಕಿಹೊಳಿ ಅವರು ಆನ್‌ಲೈನ್‌ ಮೂಲಕ ಜತೆಗೂಡಿದ್ದ 20 ಲಕ್ಷ ಕಾರ್ಯಕರ್ತರೊಂದಿಗೆ ಪಕ್ಷದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ವೇಳೆ ಇದೇ ವರ್ಚುವಲ್‌ ಸಮೂಹ ಏಕಕಾಲಕ್ಕೆ ಸಂವಿಧಾನ ಪೀಠಿಕೆಯನ್ನು ಪಠಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತು. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ 114 ದಿನಗಳ ನಂತರ ಶಿವಕುಮಾರ್‌ ಪದಗ್ರಹಣ ಮಾಡಿದರು ಎಂಬುದು ವಿಶೇಷ. 

ಡಿಕೆಶಿ ರಾಜಕೀಯ ಬೆಳವಣಿಗೆಯ ಹಿಂದೆ ಮೂವರು ಸ್ತ್ರೀ ಶಕ್ತಿಯಿದೆ. ಯಾರವರು? ಇಲ್ಲಿದೆ ನೋಡಿ..!

Video Top Stories