Asianet Suvarna News Asianet Suvarna News

ಪೊಲೀಸ್‌ ಯೂನಿಫಾರ್ಮ್‌ಗೆ ಮಸಿ ಬಳಿದ ಸರ್ಕಾರ, ಗಲಭೆಕೋರರು ಅವರಲ್ಲ ಹಾಲು ಕುಡಿಯುವ ಮಕ್ಕಳೆಂದ ಕಾಂಗ್ರೆಸ್‌!

2022ರ ಹುಬ್ಬಳಿ ಗಲಭೆ ಕೇಸ್‌ನಲ್ಲಿ ಗಲಭೆಕೋರರ ವಿರುದ್ಧ ಹಾಕಲಾಗಿದ್ದ ಕೇಸ್‌ಅನ್ನು ವಾಪಾಸ್‌ ತೆಗೆದುಕೊಳ್ಳುವ ಮೂಲಕ ರಾಜ್ಯ ಸರ್ಕಾರವೇ ಅಧಿಕೃತವಾಗಿ ಪೊಲೀಸ್‌ ತನಿಖೆ ಹಾಗೂ ಅವರ ಯೂನಿಫಾರ್ಮ್‌ಗೆ ಮಸಿ ಬಳಿಯುವ ಕೆಲಸ ಮಾಡಿದೆ. ಅವರು ಅಮಾಯಕರಲ್ಲ ಹಾಲು ಕುಡಿಯುವ ಮಕ್ಕಳು ಎನ್ನುವ ಅರ್ಥದಲ್ಲಿ ಕಾಂಗ್ರೆಸ್‌ ನಾಯಕರುಗಳು ಮಾತನಾಡಿದ್ದಾರೆ.
 

First Published Oct 11, 2024, 11:44 PM IST | Last Updated Oct 11, 2024, 11:43 PM IST

ಬೆಂಗಳೂರು (ಅ.11): ರಾಜ್ಯ ಸರ್ಕಾರ ಹುಬ್ಬಳ್ಳಿ ಗಲಭೆಕೋರರ ಕೇಸ್ ವಾಪಸ್ ಪಡೆದಿದೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ ಒಟ್ಟು 43 ಕೇಸ್ ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ. ಡಿಸಿಎಂ ಡಿಕೆಶಿ, ಗೃಹ ಸಚಿವ ಪರಮೇಶ್ವರ್ ಮನವಿಯಂತೆ ಕೇಸ್ ಹಿಂಪಡೆದುಕೊಳ್ಳಲಾಗಿದೆ.

2022ರ ಏಪ್ರಿಲ್​ 16ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದ ದಂಗೆ, ಗಲಭೆ ಇಡೀ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. 150ಕ್ಕೂ ಹೆಚ್ಚು ದಂಗೆಕೋರರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಸ್ದರು. ಕಾನೂನು ಉಲ್ಲಂಘಿಸಿ ದಂಗೆ ಎಬ್ಬಿಸಿದ್ದ ಪುಂಡರು ಈಗ ಅಮಾಯಕರು ಎಂದು ಸ್ವತಃ ರಾಜ್ಯ ಸರ್ಕಾರ ಹೇಳಿದೆ. ಇದೇ ವಿಚಾರವಾಗಿ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ.

ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದವರು ಅಮಾಯಕರಾ? 'ಗಲಭೆಯಲ್ಲಿ ಮುಗ್ಧರ ಬಂಧನ ಆಗಿದೆ' ಎಂದ ಸಚಿವ ಮುನಿಯಪ್ಪ!

ಹುಬ್ಬಳ್ಳಿ ಗಲಭೆಕೋರರ ಕೇಸ್‌ ವಾಪಾಸ್‌ ಮಾಡಿದ್ದನ್ನು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ.ಒಂದೂವರೆ ವರ್ಷದಲ್ಲಿ ಸರ್ಕಾರ ಮಾಡಿದ ಒಳ್ಳೆಯ ಕೆಲಸ ಇದು ಎಂದು ಬಿಕೆ ಹರಿಪ್ರಸಾದ್‌ ಹೇಳಿದ್ದಾರೆ.ಇದು ರಾಜಕೀಯ ಪ್ರೇರಿತ ಕೇಸ್‌ ಅದಕ್ಕಾಗಿ ವಾಪಾಸ್‌ ತೆಗೆದುಕೊಂಡಿದ್ದೇವೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.