ಬೇರೆ ರಾಜ್ಯಗಳಿಂದ ಬಂದ 20 ಜನರಿಂದ ಕ್ವಾರಂಟೈನ್ ಕಿರಿಕ್..!
ನಮಗೆ ಹೋಟೆಲ್ ಕ್ವಾರಂಟೈನ್ ಬೇಡ ಎಂದು ಹಟ ಹಿಡಿದಿದ್ದು, ಏರ್‌ಪೋರ್ಟ್‌ನಿಂದ ಹೊರ ಬರದೇ ಕಿರಿಕ್ ಆರಂಭಿಸಿದ್ದಾರೆ. ಚೆನ್ನೈ ಹಾಗೂ ಡೆಲ್ಲಿಯಿಂದ ಬಂದ 20 ಪ್ರಯಾಣಿಕರು ತಮಗೆ ಕ್ವಾರಂಟೈನ್ ಬೇಡ ಎಂದು ತಗಾದೆ ತಗಿದಿದ್ದಾರೆ.
ಬೆಂಗಳೂರು(ಮೇ.27): ಬೇರೆ ರಾಜ್ಯಗಳಿಂದ ಬರೋವರೆಗು ಒಂದು ವರಸೆ, ಬಂದ ಮೇಲೆ ಮತ್ತೊಂದು ವರಸೆ ಎನ್ನುವಂತಾಗಿದೆ ಕೆಲವರ ವರ್ತನೆ. ಇದು ಅನ್ಯರಾಜ್ಯಗಳಿಂದ ಬಂದವರು ಮಾಡುತ್ತಿರುವ ಕ್ವಾರಂಟೈನ್ ಕಿರಿಕ್.
ನಮಗೆ ಹೋಟೆಲ್ ಕ್ವಾರಂಟೈನ್ ಬೇಡ ಎಂದು ಹಟ ಹಿಡಿದಿದ್ದು, ಏರ್‌ಪೋರ್ಟ್‌ನಿಂದ ಹೊರ ಬರದೇ ಕಿರಿಕ್ ಆರಂಭಿಸಿದ್ದಾರೆ. ಚೆನ್ನೈ ಹಾಗೂ ಡೆಲ್ಲಿಯಿಂದ ಬಂದ 20 ಪ್ರಯಾಣಿಕರು ತಮಗೆ ಕ್ವಾರಂಟೈನ್ ಬೇಡ ಎಂದು ತಗಾದೆ ತಗಿದಿದ್ದಾರೆ.
ಕೊರೋನಾ ಎಫೆಕ್ಟ್: ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರ್ಕಾರ, ದೇಶದಲ್ಲಿಯೇ ಮೊದಲ ಪ್ರಯತ್ನ
ಆರೋಗ್ಯಾಧಿಕಾರಿಗಳ ಮಾತಿಗೆ ಇವರು ಒಪ್ಪುತ್ತಿಲ್ಲ. ಈ 20 ಜನರ ವರ್ತನೆ ಇದೀಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಪೊಲೀಸರು ಹಾಗೂ ಅನ್ಯ ರಾಜ್ಯಗಳಿಂದ ಬಂದ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.