Asianet Suvarna News Asianet Suvarna News

ರಾಜ್ಯಕ್ಕೆ ಬಂತು 2 ಲಕ್ಷ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್, ಶೀಘ್ರದಲ್ಲೇ ಎಲ್ಲರಿಗೂ ಲಸಿಕೆ

- ಇಂದು ರಾಜ್ಯಕ್ಕೆ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ

- . ಈವರೆಗೂ  9,50,000 ಕೋವಿಶೀಲ್ಡ್, 1,44,000 ಕೋವ್ಯಾಕ್ಸಿನ್ ಸಿಕ್ಕಿದೆ

- ಸ್ಪುಟ್ನಿಕ್ ಲಸಿಕೆಯನ್ನು ನಮ್ಮ ರಾಜ್ಯದಲ್ಲೇ ಉತ್ಪಾದನೆ ಮಾಡುವ ಗುರಿ 

First Published May 19, 2021, 1:22 PM IST | Last Updated May 19, 2021, 1:22 PM IST

ಬೆಂಗಳೂರು (ಮೇ. 19): ಲಸಿಕೆ ಅಭಾವ ಎದುರಿಸುತ್ತಿರುವಾಗ ಆಶಾದಾಯಕ ಸುದ್ದಿ ಸಿಕ್ಕಿದೆ. ' ರಾಜ್ಯ ಸರ್ಕಾರ ನೇರವಾಗಿ ಉತ್ಪಾದಕರಿಂದ ಖರೀದಿಸುತ್ತಿರುವ ಲಸಿಕೆಗಳ ಪೈಕಿ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಯ ಮತ್ತೊಂದು ಕಂತು ಲಭ್ಯವಾಗಿದೆ. ಈವರೆಗೂ  9,50,000 ಕೋವಿಶೀಲ್ಡ್, 1,44,000 ಕೋವ್ಯಾಕ್ಸಿನ್ ಸೇರಿ ಒಟ್ಟು 10,94,000 ಡೋಸ್ ಕಂಪನಿಗಳಿಂದ ಪೂರೈಕೆಯಾಗಿದ್ದು, ಕೇಂದ್ರ ಸರ್ಕಾರದಿಂದ ಒಟ್ಟು 1,11,24,470 ಡೋಸ್ ಪೂರೈಕೆಯಾಗಿದೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

ಮಾಸ್ಕ್ ಹಾಕಲ್ಲ, ಏನೀಗ? ಸೂಪರ್ ಮಾರ್ಕೆಟ್‌ನಲ್ಲಿ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕಿರಿಕ್

'ಸ್ಪುಟ್ನಿಕ್ ಲಸಿಕೆಯನ್ನು ನಮ್ಮ ರಾಜ್ಯದಲ್ಲೇ ಉತ್ಪಾದನೆ ಮಾಡುವ ಗುರಿ ಹೊಂದಿದ್ದೇವೆ. ಅಕ್ಟೋಬರ್ ಅಥವಾ ನವೆಂಬರ್‌ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ಸಿಗಲಿದೆ' ಎಂದು ಭರವಸೆ ನೀಡಿದ್ಧಾರೆ.